HEALTH TIPS

WAR | ಮಾತುಕತೆ ಆರಂಭವಾಗಿದ್ದರೂ ಲೆಬನಾನ್ ಮೇಲೆ ಇಸ್ರೇಲ್ ದಾಳಿ; 4 ಸಾವು

 ಬೈರೂತ್: ಲೆಬನಾನ್ ಮತ್ತು ಇಸ್ರೇಲ್ ನಡುವೆ ನೇರ ರಾಜತಾಂತ್ರಿಕ ಮಾತುಕತೆಗಳು ಆರಂಭವಾಗಿದ್ದರೂ ಲೆಬನಾನ್ ಮೇಲೆ ಇಸ್ರೇಲ್ ದಾಳಿ ಮಾಡಿದೆ.

ಬುಧವಾರ ತಡರಾತ್ರಿ ನಡೆದ ಘಟನೆಯಲ್ಲಿ ನಾಲ್ವರು ಮೃತಪಟ್ಟು, ಆರು ಜನರ ಗಂಭೀರವಾಗಿ ಗಾಯಗೊಂಡಿದ್ದಾರೆ. 


ನಬತಿಯಾ ಪ್ರಾಂತ್ಯದಲ್ಲಿರುವ ಹಳ್ಳಿಯೊಂದರ ಮೇಲೆ ಇಸ್ರೇಲ್ ಮೂರು ಬಾರಿ ದಾಳಿ ನಡೆಸಿದೆ.

ಗಾಯಗೊಂಡವರು ಆರೋಗ್ಯ ಇಲಾಖೆಯ ಕಾರ್ಯಕರ್ತರಾಗಿದ್ದಾರೆ ಎಂದು ಲೆಬನಾನ್‌ನ ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.

ವೈದ್ಯಕೀಯ ತಂಡ ಹಾಗೂ ಆಯಂಬುಲೆನ್ಸ್‌ ಮೇಲೆ ದಾಳಿ ಮಾಡಿರುವುದನ್ನು ಲೆಬನಾನ್‌ ಖಂಡಿಸಿದೆ. ಈ ದಾಳಿಗಳ ಕುರಿತಾಗಿ ಪ್ರತಿಕ್ರಿಯೆಗೆ ಇಸ್ರೇಲ್ ಮಿಲಿಟರಿ ತಕ್ಷಣ ಸ್ಪಂದಿಸಿಲ್ಲ. ಆದಾಗ್ಯೂ ಆಯಂಬುಲೆನ್ಸ್‌ನಲ್ಲಿ ಇರಾನ್ ಬೆಂಬಲಿತ ಹಿಬ್ಬುಲ್ಲಾ ಬಂಡುಕೋರರು ಇರುವ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದೆ ಎಂದು ಇಸ್ರೇಲ್‌ ಮೂಲಗಳು ತಿಳಿಸಿವೆ.

ಮಂಗಳವಾರದಿಂದ ವಾಷಿಂಗ್ಟನ್‌ನಲ್ಲಿ ಲೆಬನಾನ್ ಮತ್ತು ಇಸ್ರೇಲ್ ನಡುವೆ ಮಾತುಕತೆಗಳು ಆರಂಭವಾಗಿದ್ದು, ಲೆಬನಾನ್‌ನಲ್ಲಿ ನಡೆದಿರುವ ಇಸ್ರೇಲ್- ಹಿಬ್ಬುಲ್ಲಾ ಬಂಡುಕೋರರ ನಡುವಿನ ಸಂಘರ್ಷವನ್ನು ಕೊನೆಗೊಳಿಸುವ ತುರ್ತು ಅಗತ್ಯವನ್ನು ಅಮೆರಿಕದಲ್ಲಿನ ಲೆಬನಾನ್ ರಾಯಭಾರಿ ನಾಡಾ -ಹಮಾದೇಹ್ ಮೊವಾಡ್ ಇದೇ ಸಂದರ್ಭ ಪುನರುಚ್ಚರಿಸಿದರು. ಸಾರ್ವಭೌಮತ್ವ ಹಾಗೂ ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತರಬಾರದು ಎಂದು ಸಭೆಯಲ್ಲಿ ಆಗ್ರಹಿಸಿದರು.

ಇರಾನ್ ದುರ್ಬಲಗೊಂಡಿದೆ. ಇನ್ನಾದರೂ ಲೆಬನಾನ್ ಸರ್ಕಾರವು ಹಿಬ್ಬುಲ್ಲಾ ಬಂಡುಕೋರರಿಗೆ ಪ್ರೋತ್ಸಾಹ ನೀಡಬಾರದು ಎಂದು ಅಮೆರಿಕದಲ್ಲಿರುವ ಇಸ್ರೇಲ್ ರಾಯಭಾರಿ ಯೆಚೀಲ್ ಲೈಟರ್ ಮಾತುಕತೆಯಲ್ಲಿ ಪ್ರಸ್ತಾಪಿಸಿದ್ದರು. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries