HEALTH TIPS

ನಾಸಿಕ್ TCS; ಮಾರುವೇಷದಲ್ಲಿ ಪೊಲೀಸರು ಬೇಧಿಸಿದ ಲೈಂಗಿಕ ಕಿರುಕುಳ, ಮತಾಂತರ

 ಪುಣೆ: ಪ್ರತಿಷ್ಠಿತ ಕಂಪನಿಗಳಲ್ಲಿ ಒಳ್ಳೆಯ ಉದ್ಯೋಗ ಪಡೆಯಬೇಕು, ಕೈತುಂಬ ಸಂಬಳವಲ್ಲದಿದ್ದರೂ, ಮನೆಯವರಿಗೆ, ಕುಟುಂಬಕ್ಕೆ ನೆರವಾಗುವಷ್ಟು ಸಂಬಳವನ್ನು ಪಡೆಯಬೇಕು ಎಂದು ಹೆಣ್ಣುಮಕ್ಕಳು ಕನಸು ಕಂಡಿರುತ್ತಾರೆ.


ಆಫೀಸ್‌ ಪಾಲಿಟಿಕ್ಸ್, ಸಹೋದ್ಯೋಗಿಗಳ ಚುಚ್ಚು ಮಾತುಗಳು, ವ್ಯವಸ್ಥಾಪಕನ ಜೋರು ಮಾತು ಎಲ್ಲವನ್ನೂ ನುಂಗಿ ಮುಂದುವರಿಯುವ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ, ಲವ್ ಜಿಹಾದ್, ಮತಾಂತರದಂತಹ ಎಂದಿಗೂ ಕಂಡುಕೇಳರಿಯದ ಕೂಪಕ್ಕೆ ಸಿಲುಕಿದ್ದೇವೆ ಎಂದು ತಿಳಿದರೆ ಬದುಕು ಕಷ್ಟವಾಗುವುದಂತೂ ಸತ್ಯ.

ದೇಶದ ನಂಬರ್‌ 1 ಟೆಕ್‌ ಕಂಪನಿ ಎನಿಸಿಕೊಂಡಿರುವ ಟಿಸಿಎಸ್‌ (ಟಾಟಾ ಕನ್ಸಲ್ಟೆನ್ಸಿ ಸರ್ವಿಸ್‌)ನಲ್ಲಿ ಇಂತಹದ್ದೊಂದು ಘಟನೆ ನಡೆದ ಬಗ್ಗೆ ವರದಿಯಾಗಿದೆ. ನಾಸಿಕ್‌ನಲ್ಲಿನ ಟಿಸಿಎಸ್‌ ಕಂಪನಿಯ ಬಿಪಿಒ ಘಟಕದಲ್ಲಿ ಈ ಘಟನೆ ನಡೆದಿದ್ದು, ಸದ್ಯ ದೇಶದಲ್ಲಿ ಸಂಚಲನ ಮೂಡಿಸಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಘಟನೆ ಬೆಳಕಿಗೆ ಬಂದಿದ್ದು ಹೇಗೆ?

ನಾಸಿಕ್‌ ಟಿಸಿಎಸ್‌ ಕಚೇರಿಯಲ್ಲಿ ಹಿಂದೂ ಮಹಿಳಾ ಉದ್ಯೋಗಿಗಳು ಮುಸ್ಲಿಂ ಸಂಪ್ರದಾಯವನ್ನು ಪಾಲಿಸುತ್ತಿರುವುದರ ಬಗ್ಗೆ ಹಾಗೂ ಲೈಂಗಿಕ ಕಿರುಕುಳದ ಬಗ್ಗೆ 9 ಮಹಿಳಾ ಉದ್ಯೋಗಿಗಳು ಹಾಗೂ ಒಬ್ಬ ಪುರುಷ ಉದ್ಯೋಗಿ ನಾಸಿಕ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನಲ್ಲಿ 2022ರ ಫೆಬ್ರುವರಿಯಿಂದ 2026ರ ಮಾರ್ಚ್‌ವರೆಗೂ ಇಂತಹ ಘಟನೆಗಳು ನಡೆಯುತ್ತಿವೆ ಎಂದು ತಿಳಿಸಲಾಗಿತ್ತು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು 'ಆಪರೇಷನ್ ರೇಡ್‌' ಆರಂಭಿಸಿದ್ದರು. 6 ಮಹಿಳಾ ಪೊಲೀಸ್‌ ಅಧಿಕಾರಿಗಳು 40 ದಿನ ಹೌಸ್‌ ಕೀಪಿಂಗ್‌ ಆಗಿ ಕೆಲಸಕ್ಕೆ ಸೇರಿಕೊಂಡು ರಹಸ್ಯ ಕಾರ್ಯಾಚರಣೆ ಕೈಗೊಂಡಿದ್ದರು ಎಂದು ವರದಿ ತಿಳಿಸಿದೆ. ಕಚೇರಿಯಲ್ಲಿ ಏನು ನಡೆಯುತ್ತಿದೆ, ಮಹಿಳಾ ಉದ್ಯೋಗಿಗಳೊಂದಿಗೆ ಸಹೋದ್ಯೋಗಿಗಳು ನಡೆದುಕೊಳ್ಳುವ ರೀತಿ ಬಗ್ಗೆ ಹದ್ದಿನ ಕಣ್ಣಿಟ್ಟಿದ್ದ ಪೊಲೀಸರು ಕಚೇರಿಯಲ್ಲಿ ನಡೆಯುತ್ತಿದ್ದ ಅನೈತಿಕ ಕೆಲಸಗಳನ್ನು ಪತ್ತೆ ಮಾಡಿದ್ದಾರೆ.

ದೂರುಗಳ ಸರಮಾಲೆ

ತನಿಖಾಧಿಕಾರಿಗಳ ಪ್ರಕಾರ, ಮೊದಲ ಪ್ರಕರಣದಲ್ಲಿ ಮಹಿಳೆಯೊಬ್ಬರು ಪುರುಷ ಉದ್ಯೋಗಿಯ ಮೇಲೆ ಅತ್ಯಾಚಾರದ ಆರೋಪ ಹೊರಿಸಿದ್ದರು. ಹಿರಿಯ ಉದ್ಯೋಗಿಯೊಬ್ಬರು ಮದುವೆಯಾಗುವುದಾಗಿ ನಂಬಿಸಿ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರು ಎಂದೂ ಆರೋಪಿಸಿದ್ದಾರೆ.

ನಂತರದ ವಿಚಾರಣೆಯಲ್ಲಿ ಲೈಂಗಿಕ ಕಿರುಕುಳ ಮತ್ತು ಧಾರ್ಮಿಕ ನಂಬಿಕೆಗಳ ಮೇಲೆ ಪ್ರಭಾವ ಬೀರುವ ಪ್ರಯತ್ನಗಳನ್ನು ಒಳಗೊಂಡಂತೆ ಹೆಚ್ಚುವರಿ ದೂರುಗಳು ಬಂದವು. 18 ರಿಂದ 25 ವರ್ಷ ವಯಸ್ಸಿನ 12ಕ್ಕೂ ಹೆಚ್ಚು ಮಹಿಳೆಯರು ಇದೇ ರೀತಿಯ ದೂರುಗಳನ್ನು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳಾ ಸಹೋದ್ಯೋಗಳನ್ನೇ ಮಧ್ಯವರ್ತಿಯನ್ನಾಗಿ ಬಳಸಿಕೊಂಡು ಇನ್ನಷ್ಟು ಮಹಿಳೆಯರಿಗೆ ಕಿರುಕುಳ ನೀಡಲಾಗುತ್ತಿತ್ತು. ಹಲವು ಬಾರಿ ಎಚ್‌ಆರ್‌ಗಳಿಗೆ ದೂರು ನೀಡಿದರೂ ಪ್ರಯೋಜನವಾಗಲಿಲ್ಲ ಎಂದು ದೂರಿದ್ದಾರೆ ಎನ್ನಲಾಗಿದೆ.

ಎಚ್‌ಆರ್‌, ಸಹೋದ್ಯೋಗಿಗಳೇ ಸೂತ್ರದಾರರು

ಟಿಸಿಎಸ್‌ ಘಟನೆಯಲ್ಲಿ ಎಚ್‌ಆರ್‌ಗಳೇ ಪಾಲುದಾರರು ಎನ್ನುವ ಸಂಗತಿ ಬೆಳಕಿಗೆ ಬಂದಿದೆ. ಕಚೇರಿಯಲ್ಲಿ ಆಗುತ್ತಿದ್ದ ತೊಂದರೆಯ ಬಗ್ಗೆ ದೂರು ನೀಡದರೂ ಎಚ್‌ಆರ್‌ ಪ್ರತಿಕ್ರಿಯಿಸುತ್ತಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಎಲ್ಲದಕ್ಕೂ ಮಾಸ್ಟರ್‌ಮೈಂಡ್‌ನಂತಿದ್ದವರು ಎಚ್‌ಆರ್ ನಿಧಾ ಖಾನ್. ಇವರು ಸದ್ಯ ತಲೆ ಮರೆಸಿಕೊಂಡಿದ್ದಾರೆ. ಇವರಲ್ಲದೆ ಇತರ ಸಹೋದ್ಯೋಗಿಗಳಾದ ಶಫಿ ಶೇಖ್, ಆಸಿಫ್ ಅನ್ಸಾರಿ, ತೌಸಿಫ್ ಅತ್ತರ್, ಶಾರುಖ್ ಖುರೇಷಿ, ರಜಾ ಮೆಮನ್, ಡ್ಯಾನಿಶ್ ಶೇಖ್, ಮತ್ತು ಅಶ್ವಿನಿ ಚೈನಾನಿ ಪ್ರಮುಖ ಆರೋಪಿಗಳು. ಇವರನ್ನು ಕಂಪನಿ ವಜಾಗೊಳಿಸಿದೆ.

ಎಚ್‌ಆರ್‌ ನಿಧಾ ಖಾನ್‌ ಮತ್ತು ತೌಸಿಫ್‌ ಅತ್ತರ್ ಖಾನ್ ಕಿರುಕುಳ ಪ್ರಕರಣದ ಸೂತ್ರಧಾರಿಗಳಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries