ಕಾಸರಗೋಡು : 2026ರ ಸಿ.ಬಿ.ಎಸ್.ಇ 10ನೇ ಮತ್ತು 12ನೇ ತರಗತಿಯ ಪರೀಕ್ಷೆಯಲ್ಲಿ ಕಾಸರಗೋಡು ಚಿನ್ಮಯ ವಿದ್ಯಾಲಯವು ಅತ್ಯುತ್ತಮ ಫಲಿತಾಂಶವನ್ನು ಸಾಧಿಸಿ ಜಿಲ್ಲೆಯ ಹೆಮ್ಮೆಗೆ ಪಾತ್ರವಾಗಿದೆ. ಎರಡೂ ತರಗತಿಗಳಲ್ಲೂ ಶಾಲೆಯು ಶೇಕಡಾ 100 ಫಲಿತಾಂಶವನ್ನು ದಾಖಲಿಸಿದೆ.
10ನೇ ತರಗತಿಯಲ್ಲಿ ಪರೀಕ್ಷೆ ಬರೆದ 114 ವಿದ್ಯಾರ್ಥಿಗಳಲ್ಲಿ 81 ಮಂದಿ ಅತ್ಯುತ್ತಮ ಶ್ರೇಣಿ , 31 ಮಂದಿ ಪ್ರಥಮ ಶ್ರೇಣಿ ಮತ್ತು 2 ಮಂದಿ ದ್ವಿತೀಯ ಶ್ರೇಣಿಯನ್ನು ಪಡೆದಿದ್ದಾರೆ. ನಿರಂಜನಾ ವಿನೋದ್ 494 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಸಚಿಕಾ ಎಸ್ ಶೆಟ್ಟಿ 486 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಮತ್ತು ನೇಹಲ್ ಆರ್ ಗಟ್ಟಿ 484 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.
12ನೇ ತರಗತಿಯಲ್ಲಿ ಪರೀಕ್ಷೆ ಬರೆದ 27 ವಿದ್ಯಾರ್ಥಿಗಳಲ್ಲಿ 15 ಮಂದಿ ಅತ್ಯುನ್ನತ ಶ್ರೇಣಿ, 10 ಮಂದಿ ಪ್ರಥಮ ಶ್ರೇಣಿ ಮತ್ತು 2 ಮಂದಿ ದ್ವಿತೀಯ ಶ್ರೇಣಿಯನ್ನು ಪಡೆದಿದ್ದಾರೆ. ಮಾಳವಿಕಾ ಪ್ರವೀಣ್ 462 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಧಿ ಸಹನ ಹಾಗೂ ಗೌರವ್ ಕೆ 454 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಮತ್ತು ರುದ್ರಪ್ರಸಾದ್ 438 ಅಂಕಗಳೊಂದಿಗೆ ತೃತೀಯ ಸ್ಥಾನವನ್ನು ಪಡೆದಿದ್ದಾರೆ .
ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಅವರನ್ನು ಮಾರ್ಗದರ್ಶನ ಮಾಡಿದ ಶಿಕ್ಷಕರನ್ನು ಶಾಲಾ ಆಡಳಿತ ಮಂಡಳಿ ಅಭಿನಂದಿಸಿದೆ.

