ಕುಂಬಳೆ: ಹನ್ನೆರಡು ವರ್ಷಗಳ ಹಿಂದೆ ಕೆಡವಲಾದ ಕುಂಬಳೆ ಬಸ್ ನಿಲ್ದಾಣದ ಬದಲಿಯಾಗಿ ನೂತನ ಬಸ್ ನಿಲ್ದಾಣ ಹಾಗೂ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಮತ್ತೆ ಕಾಲ ಕೂಡಿ ಬಂದಿದೆ. ನಿರ್ಮಾಣಕ್ಕೆ ಚಾಲನೆ ನೀಡುವ ಅಂಗವಾಗಿ ಇಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಾಲ್ಕಂತಸ್ತಿನ ಕಟ್ಟಡ ನಿರ್ಮಿಸಲಿರುವ ಯೋಜನೆ ಸಿದ್ಧಪಡಿಸಲಾಗಿದೆ. ನೆಲ ಮಹಡಿಯಲ್ಲಿ ವಾಹನ ಪಾರ್ಕಿಂಗ್, ಸ್ಯಾನಿಟರಿ ಸೌಕರ್ಯ ಏರ್ಪಡಿಸಲಾಗುವುದು. ಒಂದು ಹಾಗೂ ಎರಡನೇ ಮಹಡಿಗಳು ಶಾಪಿಂಗ್ ಕಾಂಪ್ಲೆಕ್ಸ್ ಗಳಾಗಿರುವುದು. ನಾಲ್ಕನೇ ಮಹಡಿಯಲ್ಲಿ 500 ಮಂದಿಗೆ ಕುಳಿತುಕೊಳ್ಳಬಹುದಾದ ಸಭಾಂಗಣ ನಿರ್ಮಿಸಲು ನಿರ್ಧರಿಸಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮ ಪಂಚಾಯತಿ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್, ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಎ.ಕೆ. ಆರಿಫ್, ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಎಂ.ಖಾಲಿದ್ ಮೊದಲಾದವರು ಇಂಜಿನಿಯರ್ ಜೊತೆಗಿದ್ದರು.

.jpg)
.jpg)
