ತಿರುವನಂತಪುರಂ: ರಾಜ್ಯದಲ್ಲಿ ಜನಪ್ರಿಯ ಮದ್ಯದ ಬ್ರ್ಯಾಂಡ್‍ಗಳ ಬೆಲೆ ಇಳಿಕೆಯಾಗಿದೆ. ಓಲ್ಡ್ ಮಾಂಕ್, ಆಫೀಸರ್ಸ್ ಚಾಯ್ಸ್, ಮತ್ತು ಲೆ ಮೌಂಟ್ ರಮ್ ಸೇರಿದಂತೆ ಬ್ರ್ಯಾಂಡ್‍ಗಳ ಬೆಲೆ ಇಳಿಕೆಯಾಗಿದೆ. ಬೆಲೆಗಳನ್ನು 10 ರೂ.ಗಳಿಂದ 50 ರೂ.ಗಳಿಗೆ ಇಳಿಸಲಾಗಿದೆ. ಎಲ್ಲಾ ಬ್ರಾಂಡ್‍ಗಳಿಗೆ ಬೆಲೆ ಇಳಿಕೆ ಮಾಡಿಲ್ಲ. ಬೆಲೆ ಇಳಿಕೆ ಕೆಲವಕ್ಕೆ ಮಾತ್ರ ಅನ್ವಯಿಸುತ್ತದೆ.
ಹೊಸ ದರಗಳು ಇಂದಿನಿಂದ ಜಾರಿಗೆ ಬಂದಿದೆ. ಕೆಲವು ಬ್ರಾಂಡ್‍ಗಳ ಬೆಲೆಗಳು 30 ರೂ.ಗಳಿಂದ 50 ರೂ.ಗಳಿಗೆ ಇಳಿಕೆಯಾಗಿವೆ. ಬಿವರೇಜ್ ಕಾರ್ಪೋರೇಶನ್ ಸೂಚನೆಗಳು ಅಂಗಡಿಗಳನ್ನು ತಲುಪಿವೆ ಮತ್ತು ಪರಿಷ್ಕøತ ಬೆಲೆಗಳನ್ನು ಸಾಫ್ಟ್‍ವೇರ್‍ನಲ್ಲಿ ದಾಖಲಿಸಲಾಗಿದೆ ಎಂದು ತಿಳಿಸಲಾಗಿದೆ. ಕಂಪನಿಗಳ ಸೂಚನೆಯಂತೆ ಬೆಲೆಗಳನ್ನು ಇಳಿಸಲಾಗಿದೆ ಎಂದು ಬಿವರೇಜ್ ನಿಗಮ ಪ್ರತಿಕ್ರಿಯಿಸಿದೆ.

