ಕುಂಬಳೆ: ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸೂರಂಬೈಲು ಸರ್ಕಾರಿ ಪ್ರೌಢಶಾಲೆ ನೂರು ಶೇಕಡ ಫಲಿತಾಂಶ ಸಾಧಿಸಿದೆ. ಒಟ್ಟು ಪರೀಕ್ಷೆ ಬರೆದ 76 ವಿದ್ಯಾರ್ಥಿಗಳೂ ಉತ್ತೀರ್ಣರಾಗಿ 8 ಮಂದಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಗ್ರೇಡ್ ಗಳಿಸಿದ್ದಾರೆ. ಇಬ್ಬರು 9 ವಿಷಯಗಳಲ್ಲಿ ಎ ಪ್ಲಸ್ ಗ್ರೇಡ್ ಮತ್ತು ಮೂವರು ವಿದ್ಯಾರ್ಥಿಗಳು 8 ವಿಷಯಗಳಲ್ಲಿ ಎ ಪ್ಲಸ್ ಗ್ರೇಡ್ ಗಳಿಸಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ 18 ವಿದ್ಯಾರ್ಥಿಗಳಲ್ಲಿ 5 ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಗ್ರೇಡ್ ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.

.jpeg)
