ಬದಿಯಡ್ಕ: 2025-26ನೇ ಸಾಲಿನ ಕೇರಳ ರಾಜ್ಯ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಎಲ್ಲಾ 18 ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದು 3 ವಿದ್ಯಾರ್ಥಿಗಳು ಎಲ್ಲಾ ಹತ್ತು ವಿಷಯಗಳಲ್ಲೂ ಎ ಪ್ಲಸ್ ಅಂಕ ಪಡೆದು ಶಾಲೆಗೆ ಹಾಗೂ ಅವರ ಮನೆಗೆ ಕೀರ್ತಿ ತಂದಿರುತ್ತಾರೆ. ಸಾಧಕ ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಆಡಳಿತ ಮಂಡಳಿ, ಹಾಗೂ ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.
ಕೆ ಅಕ್ಷಯ ವೆಂಕಟೇಶ್, ವಿಷ್ಣುರಂಜನ್ ಸಿ.ಹೆಚ್. ಹಾಗೂ ಶತೋದರೀ ಪಿ.ಎಂ. ಎಲ್ಲಾ ಹತ್ತು ವಿಷಯಗಳಲ್ಲೂ ಎಪ್ಲಸ್ ಅಂಕ ಪಡೆದಿರುತ್ತಾರೆ.

-Vishnuranjan-side.jpg)
