ಬೈರೂತ್: ದಕ್ಷಿಣ ಲೆಬನಾನ್‌ನ ವಿವಿಧ ಪ್ರದೇಶಗಳ ಮೇಲೆ ಇಸ್ರೇಲ್ ಪಡೆಗಳು ಗುರುವಾರ ತೀವ್ರ ದಾಳಿ ನಡೆಸಿವೆ. ಘಟನೆಯಲ್ಲಿ 14 ಮಂದಿ ಮೃತಪಟ್ಟಿದ್ದಾರೆ.
ಲೆಬನಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳ ಸೇನಾಧಿಕಾರಿಗಳು ಶುಕ್ರವಾರ ವಾಷಿಂಗ್ಟನ್‌ನಲ್ಲಿ ಮಾತುಕತೆ ನಡೆಸಲಿದ್ದಾರೆ.
ಈ ನಡುವೆಯೇ ದಾಳಿ ತೀವ್ರಗೊಂಡಿರುವುದು ಆತಂಕ ಹೆಚ್ಚಿಸಿದೆ.
ದಾಳಿಯಲ್ಲಿ ಮೃತರಾಗಿರುವವರ ಪೈಕಿ ಐವರು ಮಹಿಳೆಯರು, ಮಕ್ಕಳು ಮತ್ತು ಒಬ್ಬ ಲೆಬನಾನ್ ಸೈನಿಕ ಸೇರಿದ್ದಾರೆ. 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದೂ ಲೆಬನಾನ್ ಮಾಧ್ಯಮಗಳು ವರದಿ ಮಾಡಿವೆ.
ಇತ್ತ ಉತ್ತರ ಗಾಜಾದ ಮೇಲೆ ಹೆಜ್ಬುಲ್ಲಾ ಉಗ್ರರು ನಡೆಸಿದ ಡ್ರೋನ್ ದಾಳಿಯಿಂದ ಒಬ್ಬ ಇಸ್ರೇಲಿ ಸೈನಿಕ ಮೃತಪಟ್ಟಿದ್ದಾರೆಂದು ಇಸ್ರೇಲಿ ಮಿಲಿಟರಿ ಮಾಹಿತಿ ನೀಡಿದೆ.

