ವಾಷಿಂಗ್ಟನ್: ಹೊರ್ಮುಜ್ ಜಲಸಂಧಿ ಮೂಲಕ ಸಾಗುವ ಹಡಗುಗಳಿಂದ ಶುಲ್ಕ ಸಂಗ್ರಹಿಸುತ್ತಿರುವ ಇರಾನ್‌ನ 'ಪರ್ಷಿಯನ್ ಕೊಲ್ಲಿ ಜಲಸಂಧಿ ಪ್ರಾಧಿಕಾರ'ದ ಮೇಲೆ ನಿರ್ಬಂಧ ಹೇರಿದ್ದಾಗಿ ಅಮೆರಿಕದ ಹಣಕಾಸು ಇಲಾಖೆ ಘೋಷಿಸಿದೆ.
'ಜಗತ್ತಿನ ವಿವಿಧ ರಾಷ್ಟ್ರಗಳ ತೈಲ ಹೊತ್ತ ಹಡಗುಗಳು ಹೊರ್ಮುಜ್ ಜಲಸಂಧಿ ಮೂಲಕ ಸಾಗುತ್ತವೆ.
ಈ ಹಡಗುಗಳಿಂದ ಇರಾನ್ ಸೇನೆ ಶುಲ್ಕ ಸಂಗ್ರಹಿಸಲು ಆರಂಭಿಸಿದೆ. ಹಣಕ್ಕಾಗಿ ಇರಾನ್ ಸರ್ಕಾರ ಹತಾಶಗೊಂಡಿರುವುದನ್ನು ಈ ವಿದ್ಯಮಾನ ತೋರಿಸುತ್ತದೆ' ಎಂದು ಹಣಕಾಸು ಇಲಾಖೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
'ಪ್ರಾಧಿಕಾರಕ್ಕೆ ಶುಲ್ಕ ಪಾವತಿಸುವ ದೇಶ/ಕಂಪನಿಗಳ ಮೇಲೂ ನಿರ್ಬಂಧ ವಿಧಿಸಲಾಗುವುದು' ಎಂದು ಅವರು ಎಚ್ಚರಿಸಿದ್ದಾರೆ. ಶುಲ್ಕ ಸಂಗ್ರಹಿಸುವ ಉದ್ದೇಶದಿಂದ ಐಆರ್‌ಜಿಸಿ ಈ ಪ್ರಾಧಿಕಾರವನ್ನು ಹೊಸದಾಗಿ ಸ್ಥಾಪಿಸಿದೆ.

