HEALTH TIPS

ಅಮುಲ್ ಹಾಲಿನ ಬೆಲೆ ಲೀಟರ್‌ಗೆ ₹2 ಹೆಚ್ಚಳ: ಎಮ್ಮೆ ಹಾಲಿನ ಬೆಲೆ ₹4 ಹೆಚ್ಚಳ

ನವದೆಹಲಿ: ಅಮುಲ್ ಬ್ರಾಂಡ್ ಅಡಿ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟವು(ಜಿಸಿಎಂಎಂಎಫ್) ದೇಶದಾದ್ಯಂತ ಪ್ರತಿ ಲೀಟರ್ ಹಾಲಿನ ಬೆಲೆಯಲ್ಲಿ ₹2 ಹೆಚ್ಚಳ ಮಾಡಿದೆ. ಮೇ 14ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.

ಹಾಲಿನ ಬೆಲೆ ಏರಿಕೆಯು ಆಹಾರ ಹಣದುಬ್ಬರ ಹೆಚ್ಚಳ ಮತ್ತು ಮಧ್ಯಮ ವರ್ಗಕ್ಕೆ ಹೊರೆಯಾಗಲಿದೆ ಎಂದು ವರದಿ ತಿಳಿಸಿದೆ.

2025ರ ಮೇ 1ರಂದು ಅಮುಲ್ ಹಾಲಿನ ದರ ಏರಿಕೆಯಾಗಿತ್ತು.

ಅಮುಲ್ ಬ್ರಾಂಡ್‌ನ ಎಲ್ಲ ವಿಧದ ಹಾಲಿನ ಮೇಲೆ ದೇಶದಾದ್ಯಂತ ಪ್ರತಿ ಲೀಟರ್‌ಗೆ ₹2 ಹೆಚ್ಚಳ ಮಾಡಿರುವುದಾಗಿ ಜಿಸಿಎಂಎಂಎಫ್ ಪ್ರಕಟಣೆ ತಿಳಿಸಿದೆ.

'ಹಾಲಿನ ಒಟ್ಟಾರೆ ಕಾರ್ಯಾಚರಣೆ ಮತ್ತು ಉತ್ಪಾದನೆ ವೆಚ್ಚದಲ್ಲಿನ ಹೆಚ್ಚಳದಿಂದಾಗಿ ಬೆಲೆ ಏರಿಕೆ ಮಾಡಲಾಗುತ್ತಿದೆ. ಈ ವರ್ಷದಲ್ಲಿ ಜಾನುವಾರು ಮೇವು, ಹಾಲಿನ ಪ್ಯಾಕೇಜಿಂಗ್ ಮತ್ತು ಇಂಧನದ ವೆಚ್ಚದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ' ಎಂದು ಪ್ರಕಟಣೆ ತಿಳಿಸಿದೆ.

ಹಾಲು ಮತ್ತು ಹಾಲಿನ ಉತ್ಪನ್ನಗಳಿಂದ ಬರುವ ಆದಾಯದಲ್ಲಿ ರೂಪಾಯಿಗೆ 80 ಪೈಸೆ ಹಾಲು ಉತ್ಪಾದಕರಿಗೆ ನೀಡಲಾಗುತ್ತಿದೆ ಎಂದು ಮಂಡಳಿ ತಿಳಿಸಿದೆ.

ದರ ಪರಿಷ್ಕರಣೆ ಬಳಿಕ ದೆಹಲಿ-ಎನ್‌ಸಿಆರ್ ಮತ್ತು ಉತ್ತರ ಪ್ರದೇಶಗಳಲ್ಲಿ 500 ಎಂ.ಎಲ್. ಸ್ಲಿಮ್ ಪ್ಯಾಕ್‌ ಹಾಲಿಗೆ ₹27, ತಾಜಾ ಹಾಲಿಗೆ 30, ಹಸುವಿನ ಹಾಲು ಅರ್ಧ ಲೀಟರ್‌ಗೆ ₹31 ಮತ್ತು ಗೋಲ್ಡ್ ₹36 ಆಗಿದೆ.

ಎಮ್ಮೆ ಹಾಲಿನ ಬೆಲೆ ಲೀಟರ್‌ಗೆ ₹4 ಹೆಚ್ಚಳವಾಗಿದ್ದು, ಲೀಟರ್‌ಗೆ ₹80 ಆಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries