HEALTH TIPS

20 ರಂದು 'ಲಯಂ ಕಲಾಕ್ಷೇತ್ರ' ಕಾಸರಗೋಡು ವಿದ್ಯಾಲಯದ 30 ನೇ ನೃತ್ಯ ಸಂಗೀತೋತ್ಸವ

ಕಾಸರಗೋಡು: ಉತ್ತರ ಕೇರಳದ ಕಲಾ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಲಯಂ ಕಲಾಕ್ಷೇತ್ರವು, ತನ್ನ ಕಾಸರಗೋಡು ವಿದ್ಯಾಲಯದ 30 ನೇ ನೃತ್ಯ ಸಂಗೀತೋತ್ಸವ ಮೇ 20ರಂದು ಕಾಸರಗೋಡು ಪಿಲಿಕುಂಜೆ  ಶ್ರೀ ಐವರ್ ಭಗವತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ ಎಂದು ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 


ಬೆಳಗ್ಗೆ 9ಕ್ಕೆ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದೊಂದಿಗೆ ಕಲೋÅತ್ಸವ ಆರಂಭವಾಗಲಿದೆ. ಬೆಳಗ್ಗೆ 11ಕ್ಕೆ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ 'ಸ್ವರಾವಳಿ'ಯನ್ನು ಪ್ರದರ್ಶಿಸಲಿದ್ದಾರೆ. ಮಧ್ಯಾಹ್ನ 3ಕ್ಕೆ ಹಳೇ ಚಲನಚಿತ್ರ ಗೀತೆಗಳಾದ 'ಓಲ್ಡ್ ಈಸ್ ಗೋಲ್ಡ್' ಅನ್ನು ಆಧರಿಸಿದ ಸಂಗೀತ ಕಾರ್ಯಕ್ರಮವನ್ನು ಹಿನ್ನೆಲೆ ಗಾಯಕ ಶ್ರೀ ಚೆಂಗನ್ನೂರು ಶ್ರೀಕುಮಾರ್ ಅವರ ನೇತೃತ್ವದಲ್ಲಿ ಪ್ರಸ್ತುತಪಡಿಸಲಾಗುವುದು.

ಸಂಜೆ 5ಕ್ಕೆ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಸರಗೋಡು ನಗರಸಭಾದ್ಯಕ್ಷೆ ಶಾಹಿನಾ ಸಲೀಂ ವಹಿಸಲಿದ್ದಾರೆ. ಖ್ಯಾತ ಕಲಾವಿದರಾದ ಕಲಾಮಂಡಲಂ ಶೈಜು,  ಕಲಾಮಂಡಲಂ ವಿಶ್ವಾಸ್ ಮತ್ತು  ರಘು ತಿರುವಂಬಾಡಿ ದೀಪ ಬೆಳಗಿಸುವ ಮೂಲಕ ನೃತ್ಯೋತ್ಸವ ಉದ್ಘಾಟಿಸುವರು. ಕೌನ್ಸಿಲರ್  ರಾಜೇಶ್ ಅಮೈ, ದೇವಸ್ಥಾನದ ಆಚಾರ್ಯರಾದ  ಮಂಜು ಕಾರ್ನವರ್, ನಾಗೇಶ್ ಕಾರ್ನವರ್ ಪಾಲ್ಗೊಳ್ಳುವರು.

ಸಂಜೆ 6ಕ್ಕೆ ಶಾಸ್ತ್ರೀಯ ನೃತ್ಯೋತ್ಸವದಲ್ಲಿ ಕಲಾಮಂಡಲಂ ವನಜಾ ರಾಜನ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಭರತನಾಟ್ಯ, ಮೋಹಿನಿಯಾಟ್ಟಂ ಮತ್ತು ಕೂಚಿಪುಡಿ ನೃತ್ಯಪ್ರದರ್ಶಿಸಲಿದ್ದಾರೆ. ನಂತರ ಹಿರಿಯ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಲಿದೆ. ರಾತ್ರಿ 9.30 ಕ್ಕೆ ರಾಷ್ಟ್ರಗೀತೆಯೊಂದಿಗೆ ನೃತ್ಯ ಮತ್ತು ಸಂಗೀತ ಉತ್ಸವ ಮುಕ್ತಾಯಗೊಳ್ಳಲಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries