HEALTH TIPS

2024ರಲ್ಲಿ ಭಾರತದಲ್ಲಿ 14,488 ವಿದ್ಯಾರ್ಥಿಗಳು ಆತ್ಮಹತ್ಯೆ: ಎನ್‌ಸಿಆರ್‌ಬಿ ವರದಿ

ನವದೆಹಲಿ: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಇತ್ತೀಚಿಗೆ ಬಿಡುಗಡೆಗೊಳಿಸಿರುವ ಅಂಕಿಅಂಶಗಳ ಪ್ರಕಾರ 2024ರಲ್ಲಿ ಭಾರತದಲ್ಲಿ ದಾಖಲೆಯ 14,488 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು,ಇದು ಸಾರ್ವಕಾಲಿಕ ಗರಿಷ್ಠವಾಗಿದೆ. ಇದು 2023ರ 13,892 ಪ್ರಕರಣಗಳಿಗೆ ಹೋಲಿಸಿದರೆ ಶೇ.4.3ರಷ್ಟು ಏರಿಕೆಯನ್ನು ಸೂಚಿಸಿದೆ.

ಇದೇ ಅವಧಿಯಲ್ಲಿ ದೇಶದಲ್ಲಿ ಒಟ್ಟು ಆತ್ಮಹತ್ಯೆ ಪ್ರಕರಣಗಳು 1,71,418ರಿಂದ 1,70,746ಕ್ಕೆ ಅಂದರೆ ಶೇ.0.4ರಷ್ಟು ಇಳಿಕೆಯಾಗಿವೆ.

2020ರಲ್ಲಿ 1,53,052ರಷ್ಟಿದ್ದ ಒಟ್ಟು ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಐದು ವರ್ಷಗಳಲ್ಲಿ ಶೇ.11.6ರಷ್ಟು ಏರಿಕೆಯಾಗಿದೆ ಮತ್ತು 2015ರಲ್ಲಿ 1,33,623ರಷ್ಟಿದ್ದ ಇಂತಹ ಆತ್ಮಹತ್ಯೆ ಪ್ರಕರಣಗಳಲ್ಲಿ ಒಂದು ದಶಕದಲ್ಲಿ ಶೇ.27.8ರಷ್ಟು ಹೆಚ್ಚಳವಾಗಿದೆ. ಆದರೆ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳಲ್ಲಿ ಇದಕ್ಕೂ ಹೆಚ್ಚಿನ ಏರಿಕೆಯಾಗಿದೆ. 2020ರಲ್ಲಿ 12,526ರಷ್ಟಿದ್ದ ಇಂತಹ ಪ್ರಕರಣಗಳಲ್ಲಿ ಐದು ವರ್ಷಗಳಲ್ಲಿ ಶೇ.15.7ರಷ್ಟು ಹೆಚ್ಚಳವಾಗಿದೆ. ಇದೇ ವೇಳೆ,2015ರಲ್ಲಿ 8,394ರಷ್ಟಿದ್ದ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳಲ್ಲಿ ಹತ್ತು ವರ್ಷಗಳಲ್ಲಿ ಶೇ.62.2ರಷ್ಟು ಏರಿಕೆಯಾಗಿದೆ.

2015 ಮತ್ತು 2024ರ ನಡುವೆ ಒಟ್ಟು 1,15,850 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾರತದಲ್ಲಿ ಒಟ್ಟು ಆತ್ಮಹತ್ಯೆ ಪ್ರಕರಣಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಗಳ ಪಾಲು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.

ಎನ್‌ಸಿಆರ್‌ಬಿ ವರದಿಯ ಪ್ರಕಾರ 2024ರಲ್ಲಿ ದಾಖಲಾದ ಒಟ್ಟು 1,70,746 ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ.8.5ರಷ್ಟು ವಿದ್ಯಾರ್ಥಿಗಳಾಗಿದ್ದರು. 2015ರಲ್ಲಿ ಈ ಪ್ರಮಾಣ ಶೇ.6.7ರಷ್ಟಿತ್ತು.

ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳಲ್ಲಿ ಹೆಚ್ಚಳವು ಶೈಕ್ಷಣಿಕ ಒತ್ತಡ,ಚಿಕಿತ್ಸೆ ಪಡೆಯದ ಮಾನಸಿಕ ತೊಂದರೆಗಳು ಮತ್ತು ದುರ್ಬಲ ಬೆಂಬಲ ವ್ಯವಸ್ಥೆಗಳಿಂದ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಆರೋಗ್ಯ ಬಿಕ್ಕಟ್ಟನ್ನು ಪ್ರತಿಬಿಂಬಿಸುತ್ತಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2024ರಲ್ಲಿ ಆತ್ಮಹತ್ಯೆ ಮಾಡಿಕೊಂಡ 14,488 ವಿದ್ಯಾರ್ಥಿಗಳಲ್ಲಿ 7,669 ಪುರುಷರು ಮತ್ತು 6,819 ಮಹಿಳೆಯರು ಸೇರಿದ್ದರು. ಅತ್ಯಂತ ಹೆಚ್ಚಿನ ಪ್ರಕರಣಗಳು ಮಹಾರಾಷ್ಟ್ರದಲ್ಲಿ (ಶೇ.13.2) ವರದಿಯಾಗಿದ್ದರೆ ನಂತರದ ಸ್ಥಾನಗಳಲ್ಲಿ ಉತ್ತರ ಪ್ರದೇಶ (ಶೇ.10.9),ಮಧ್ಯಪ್ರದೇಶ (ಶೇ.10) ಮತ್ತು ತಮಿಳುನಾಡು (ಶೇ.8.9) ಇವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries