HEALTH TIPS

ಕಡಂಬಾರಿನಲ್ಲಿ ಶ್ರೀ ವಿಷ್ಣು ಯಕ್ಷ ವೈಭವ - 2026 ಸಂಪನ್ನ

ಮಂಜೇಶ್ವರ: ಮಜಿಬೈಲು ಶ್ರೀ ವಿಷ್ಣು ಯಕ್ಷಬಳಗ ಕಲಾ ತಂಡದ ಶ್ರೀ ವಿಷ್ಣು ಯಕ್ಷ ವೈಭವ 2026 ಇತ್ತೀಚೆಗೆ  ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಕಡಂಬಾರು  ದೇಗುಲದ ವಠಾರದಲ್ಲಿ ಬಯಲಾಟ, ಸಭಾ ಕಾರ್ಯಕ್ರಮ, ಸನ್ಮಾನ ಸಹಿತ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿ ಸಂಪನ್ನಗೊಂಡಿತು.


ಸಭಾ ಕಾರ್ಯಕ್ರಮದಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಕಡಂಬಾರು ಕ್ಷೇತ್ರದ ಆಡಳಿತ ಮೊಕ್ತೇಸರ ಸೂರ್ಯನಾರಾಯಣಯ್ಯ  ಅಧ್ಯಕ್ಷತೆ ವಹಿಸಿದ್ದರು. ವೈದಿಕ ವಿದ್ವಾಂಸ ರಾಮದಾಸ ಆಚಾರ್ಯ ಕಡಂಬಾರು ಶುಭಾಶಂಸನೆಗೈದರು. ಮುಖ್ಯ ಅಭ್ಯಾಗತರಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಸಂಕಬೈಲು, ಕನಿಲ ಶ್ರೀಕ್ಷೇತ್ರದ ಜೀಣೋದ್ಧಾರ ಸಮಿತಿ ಅಧ್ಯಕ್ಷ ಪದ್ಮನಾಭ ಕಡಪ್ಪರ ಉಪಸ್ಥಿತರಿದ್ದರು.

ಕಲಾತಪಸಿ ನಾಟ್ಯನಿಲಯಂ್ವ ಬಾಲಕೃಷ್ಣ ಮಂಜೇಶ್ವರ ಹಾಗೂ ರಾಜಾರಾಮ ರಾವ್ ಮೀಯಪದವು ಅವರನ್ನು ಗಣ್ಯರ ಸಮಕ್ಷಮ ಸನ್ಮಾನಿಸಿ ಗೌರವಿಸಲಾಯಿತು. ವೇದಮೂರ್ತಿ ಹರಿನಾರಾಯಣ ಮಯ್ಯ ಬಜೆ ಸ್ವಾಗತಿಸಿ, ಗುರುರಾಜ ಹೊಳ್ಳ ಬಾಯಾರು ನಿರೂಪಿಸಿದರು. ಶಿಕ್ಷಕ ಕಿರಣ ಮಾಸ್ತರ್ ಕುದ್ರೆಕೋಡ್ಲು ವಂದಿಸಿದರು. ಪಲ್ಲವಿ ಕುದ್ರೆಕೋಡ್ಲು ಹಾಗೂ, ರಘುಪ್ರಸಾದ್ ನಾವಡ ಬಂದ್ಯೋಡು ಸನ್ಮಾನ ಪತ್ರ ವಾಚಿಸಿದರು.

ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಕಡಂಬಾರು, ಶ್ರೀ ಗುರುನರಸಿಂಹ ಯಕ್ಷಬಳಗ ಮೀಯಪದವು, ಶ್ರೀ ಬೆನಕ ಯಕ್ಷಕಲಾ ವೇದಿಕೆ ಪೈವಳಿಕೆ ಸಮಾರಂಭಕ್ಕೆ  ಸಹಕಾರ ನೀಡಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries