HEALTH TIPS

ನೀಟ್‌-ಯುಜಿ ಪರೀಕ್ಷೆ: ಬ್ಯಾಂಕ್‌ ಖಾತೆ ವಿವರ ಸಲ್ಲಿಕೆಗೆ ಜೂ.22ರವರೆಗೆ ಅವಕಾಶ

 ವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆಯಿಂದ ರದ್ದಾಗಿರುವ ಹಾಗೂ ಹೊಸದಾಗಿ ನಡೆಯಲಿರುವ ನೀಟ್‌-ಯುಜಿ ಪರೀಕ್ಷೆಯ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕ ಮರುಪಾವತಿಗಾಗಿ ಬ್ಯಾಂಕ್‌ ಖಾತೆ ವಿವರ ನವೀಕರಿಸುವ ಗಡುವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಜೂನ್‌ 22ರವರೆಗೆ ವಿಸ್ತರಿಸಿದೆ. 


ಜೂನ್‌ 21ರಂದು ನೀಟ್‌-ಯುಜಿ ಮರು ಪರೀಕ್ಷೆ ನಡೆಸುವುದಾಗಿ ಘೋಷಿಸಿದ್ದ ಎನ್‌ಟಿಎ, 'ಈ ಪರೀಕ್ಷೆಗೆ ಶುಲ್ಕ ವಿಧಿಸುವುದಿಲ್ಲ' ಎಂದು ಹೇಳಿತ್ತು.

ಶುಲ್ಕ ಮರುಪಾವತಿ ಪ್ರಕ್ರಿಯೆಗಾಗಿ ಆದ್ಯತೆಯ ಬ್ಯಾಂಕ್‌ ಖಾತೆ ವಿವರ ಸಲ್ಲಿಸಲು ನೀಟ್‌-ಯುಜಿ ನೋಂದಣಿ ಪೋರ್ಟಲ್‌ನಲ್ಲಿ ಮೇ 22ರಿಂದ ಮೇ 26ರವರೆಗೆ ಅವಕಾಶ ನೀಡಿತ್ತು.

'ಇದುವರೆಗೆ ಸುಮಾರು 13 ಲಕ್ಷ ಅಭ್ಯರ್ಥಿಗಳು ಬ್ಯಾಂಕ್‌ ಖಾತೆ ವಿವರಗಳನ್ನು ನವೀಕರಿಸಿದ್ದಾರೆ. ಇನ್ನೂ ತಮ್ಮ ವಿವರಗಳನ್ನು ಸಲ್ಲಿಸದ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ದಿನಾಂಕವನ್ನು ವಿಸ್ತರಿಸಲಾಗಿದೆ. ಅಭ್ಯರ್ಥಿಗಳು ನೀಟ್‌-ಯುಜಿ ನೋಂದಣಿ ಪೋರ್ಟಲ್‌ಗೆ ಲಾಗಿನ್‌ ಆಗಿ ತಮ್ಮ ಬ್ಯಾಂಕ್‌ ಖಾತೆ ವಿವರಗಳನ್ನು ಸಲ್ಲಿಸಲು ಮರುಪಾವತಿ ಲಿಂಕ್‌ ಪ್ರವೇಶಿಸಬಹುದು. ಇದಕ್ಕೆ ಜೂನ್‌ 22ರ ರಾತ್ರಿ 11.50ರವರೆಗೆ ಅವಕಾಶವಿದೆ' ಎಂದು ಎನ್‌ಟಿಎ ತಿಳಿಸಿದೆ.

'ಬ್ಯಾಂಕ್‌ ಖಾತೆ ಮಾಹಿತಿಯ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಅಭ್ಯರ್ಥಿಗಳು ಬಯಸಿದರೆ ರದ್ದುಪಡಿಸಿದ ಚೆಕ್‌ ಅಪ್‌ಲೋಡ್‌ ಮಾಡಬಹುದು' ಎಂದು ಹೇಳಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries