ಕಾಸರಗೋಡು: [ಫಲೀಸ್ ಸೋಗಿನಲ್ಲಿ ಚಿನ್ನದಂಗಡಿಗೆ ಆಗಮಿಸಿದ ವ್ಯಕ್ತಿ 2.65 ಲಕ್ಷ ರೂ. ಮೌಲ್ಯದ ಚಿನ್ನ ಎಗರಿಸಿದ ಘಟನೆ ಉದುಮದಲ್ಲಿ ನಡೆದಿದೆ. ಉದುಮ ರೈಲ್ವೇ ಗೇಟ್ ಸಮೀಪದ ಚಿನ್ನದಂಗಡಿಯೊಂದರಿಂದ ಎರಡು ಬಾರಿಯಾಗಿ ಒಟ್ಟು 12.600 ಗ್ರಾಂ ಚಿನ್ನದೊಡವೆಯನ್ನು ಈ ರೀತಿ ವಂಚಿಸಿರುವ ಬಗ್ಗೆ ಚಿನ್ನದಂಗಡಿ ಮಾಲಿಕ ಕೆ. ಗಣೇಶನ್ ಬೇಕಲ ಠಾಣೆ ಪೆÇಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ತಿರುವನಂತಪುರ ನೆರಿಕ್ಕಲ್ ಮೂಕನ ನಿವಾಸಿ ಮನು ಎಂಬಾತ ಈ ರೀತಿ ವಂಚನೆ ನಡೆಸಿರುವುದು ತನಿಖೆಯಲ್ಲಿ ಸ್ಪಷ್ಟಗೊಂಡಿರುವುದಾಗಿ ಬೇಕಲ ಠಾಣೆ ಪೆÇಲೀಸರು ತಿಳಿಸಿದ್ದಾರೆ. ಮೇ 26ರಂದು ಚಿನ್ನದಂಗಡಿಗೆ ಆಗಮಿಸಿದ ಆಗಂತುಕ, ನಾನು ಕೊಲ್ಲಂ ನಿವಾಸಿಯಾಗಿದ್ದು, ಅವಿಲ್‍ರಾಜ್ ಎಂದು ತನ್ನ ಹೆಸರು ಹೇಳಿಕೊಮಡಿದ್ದು, ಕಳೆದ ಏಳು ತಿಂಗಳಿಂದ ತಾನು ಬೇಕಲ ಠಾಣೆಯಲ್ಲಿ ಸಿವಿಲ್ ಪೆÇಲೀಸ್ ಆಫೀಸರ್ ಸೇವೆ ಸಲ್ಲಿಸುತ್ತಿರುವುದಾಗಿ ಅಂಗಡಿ ಮಾಲಕನಿಗೆ ಪರಿಚಯ ಮಾಡಿಕೊಂಡಿದ್ದನು. ನಂತರ ಅಂಗಡಿಯಿಂದ ಸರ ಮತ್ತು ಉಂಗುರ ಸೇರಿದಂತೆ ಮೊದಲು 1,29,500 ರೂ. ಮೌಲ್ಯದ ಚಿನ್ನ ಖರೀದಿಸಿ ಅದರ ಹಣ ನಿಮ್ಮ ಬ್ಯಾಂಕ್ ಖಾತೆಗೆ ಕಳುಹಿಸಿಕೊಟ್ಟಿರುವುದಾಗಿ ಹೇಳಿ ಅದರ ಸಂದೇಶವನ್ನು ಅಂಗಡಿ ಮಾಲಕನಿಗೆ ತೋರಿಸಿ ಆರೋಪಿ ಅಲ್ಲಿಂದ ಹೊರ ಹೋಗಿದ್ದನು. ಅನಂತರ ಅದೇ ದಿನ ಸಂಜೆ ಆರೋಪಿ ಮತ್ತೆ ಅದೇ ಚಿನ್ನದಂಗಡಿಗೆ ಬಂದು ನನ್ನ ಪತ್ನಿಯ ಸಹೋದರನಿಗೆ ಉಡುಗೊರೆ ರೂಪದಲ್ಲಿ ನೀಡಲೆಂದು ಹೇಳಿ ಮತ್ತೆ 1,31,000 ರೂ. ಮೌಲ್ಯದ ಚಿನ್ನದ ಕೈ ಚೈನ್ ಖರೀದಿಸಿ ಅದರ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಕಳುಹಿಸಿಕೊಟ್ಟಿರುವುದಾಗಿ ತೋರಿಸುವ ಫೆÇೀನ್ ಸಂದೇಶವನ್ನು ಅಂಗಡಿ ಮಾಲಿಕನಿಗೆ ತೋರಿಸಿ ಅಲ್ಲಿಂದ ಕಾಲ್ಕಿತ್ತಿದ್ದನು. ಅಂಗಡಿ ಮಾಲಿಕ ನಂತರ ಬ್ಯಾಂಕ್ ಸಂಪರ್ಕಿಸಿದಾಗ ತಮ್ಮ ಖಾತೆಗೆ ಯಾವುದೇ ಹಣ ಪಾವತಿಯಾಗದಿರುವುದರಿಂದ ತಾನು ವಂಚನೆಗೊಳಗಾಗಿರುವುದು ಗಮನಕ್ಕೆ ಬಂದಿದೆ. ಆ ಬಗ್ಗೆ ಅಂಗಡಿ ಮಾಲಿಕ ನೀಡಿದ ದೂರಿನನ್ವಯ ಬೇಕಲ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಪೆÇಲೀಸರು ಸಿ.ಸಿ. ಟಿವಿ ದೃಶ್ಯ ಪರಿಶೀಲಿಸಿದಾಗ ವಂಚನೆ ನಡೆಸಿರುವ ವ್ಯಕ್ತಿ ತಿರುವನಂತಪುರ ನಿವಾಸಿ ಮನು ಎಂಬುದಾಗಿ ತಿಳಿದು ಬಂದಿದ್ದು, ಆರೋಪಿ ಪತ್ತೆಗೆ ಹುಡುಕಾಟ ಆರಂಭಿಸಿದ್ದಾರೆ.
6

