ಮುಳ್ಳೇರಿಯ: ಕಾರಡ್ಕ ಪಂಚಾಯಿತಿಯ ಕಮರ್ಂತೋಡಿ ಮೂಡಾಂಕುಳದಲ್ಲಿ ಯುವತಿ ಮೃತದೇಹ ಮನೆಯ ಬೆಡ್‍ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಾಗಾಲ್ಯಾಂಡ್‍ನಲ್ಲಿ ಸೈನಿಕನಾಗಿರುವ ರಾಜೇಶ್ ಕುಮಾರ್ ಅವರ ಪತ್ನಿ ಸೌಪರ್ಣಿಕ (40) ಮೃತಪಟ್ಟ ಯುವತಿ.
ಹೊಸದಾಗಿ ನಿರ್ಮಿಸಿದ ಮನೆಯ ಗೃಹ ಪ್ರವೇಶ ಒಂದು ತಿಂಗಳ ಹಿಂದೆಯಷ್ಟೇ ನಡೆದಿದ್ದು, ಕಾರ್ಯಕ್ರಮಕ್ಕೆ ಆಗಮಿಸಿದ್ದ ರಾಜೇಶ್ ಕುಮಾರ್ ದಿವಸಗಳ ಹಿಂದೆಯಷ್ಟೆ ಕೆಲಸ ಸ್ಥಳಕ್ಕೆ ವಾಪಸಾಗಿದ್ದರು. ಈ ಮಧ್ಯೆ ಶನಿವಾರ ಬೆಳಗ್ಗೆ ಸೌಪರ್ಣಿಕ ಅವರು ಮನೆಯ ಮೇಲಂತಸ್ತಿನ ಬೆಡ್‍ರೂಮಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಇವರನ್ನು ನೇಣಿನಿಂದ ಕೆಳಗಿಳಿಸಿ, ಮುಳ್ಳೇರಿಯದ ಆಸ್ಪತ್ರೆಗೆ ತಲುಪಿಸಿದರೂ ಪ್ರಯೋಜನವಾಗಿರಲಿಲ್ಲ. ಸೌಪರ್ಣಿಕಾ ಅವರು ಮುಳಿಯಾರು ಸನಿಹದ ಪಾತನಡ್ಕ ನಿವಾಸಿಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದೂರು ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಶವಮಹಜರು ನಡೆಸಲಾಯಿತು.


