ಕಾಸರಗೋಡು: ಜಿಲ್ಲೆಯ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನ ಗ್ರಾಮೀಣ ಪ್ರದೇಶದ ಮಹಿಳೆಯರಿಗೂ ಕೇರಳಾ ಕೆಎಸ್ಸಾರ್ಟೀಸಿ ಬಸ್‍ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಒದಗಿಸುವಂತೆ ಮುಖ್ಯಮಂತ್ರಿ ವಿ. ಡಿ ಸತೀಶನ್ ಹಾಗೂ ಸಾರಿಗೆ ಸಚಿವ ಸಿ.ಪಿ ಜೋನ್ ಅವರನ್ನು ಕಾಸರಗೋಡು ಜಿಲ್ಲಾ ಒಬಿಸಿ ಮೋರ್ಛಾ ಅಧ್ಯಕ್ಷ ಕೆ. ಪಿ. ವಲ್ಸರಾಜ್ ಒತ್ತಾಯಿಸಿದ್ದಾರೆ.
ಕಾಸರಗೋಡು-ಮಂಗಳೂರು ನಡುವೆ ಅಂತಾರಾಜ್ಯ ಸಂಚಾರದ ಬಸ್ಸುಗಳಲ್ಲೂ ಕಾಸರಗೋಡು ಜಿಲ್ಲೆಯ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಬೇಕು. ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನಲ್ಲಿ ಹೆಚ್ಚಿನ ಬಸ್‍ಗಳು ಅಂತಾರಾಜ್ಯ ಸಂಚಾರದವುಗಳಾಗಿದ್ದು, ಈ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನಿಷೇಧಿಸಿದರೆ ಕಾಸರಗೋಡಿನ ಗಡಿಭಾಗದ ಮಹಿಳೆಯರು ಯೋಜನೆಯಿಂದ ವಂಚಿತರಾಗಲಿದ್ದಾರೆ. ಉತ್ತರ ಕೇರಳದ ತುತ್ತ ತುದಿಯ ಮಂಜೇಶ್ವರ ಭಾಗಕ್ಕೂ ಸೌಲಭ್ಯ ವಿಸ್ತರಣೆಯಾಗುವಂತೆ ಎಲ್ಲಾ ಕೆಎಸ್ಸಾರ್ಟೀಸಿ ಬಸ್ ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಒದಗಿಸಿಕೊಡಬೇಕು ಎಂದು ಮನವಿ ಮೂಲಕ ಒತ್ತಾಯಿಸಿದ್ದಾರೆ.

