ಕಾಸರಗೋಡು: ಬೆಂಗಳೂರಿನ 'ಕನ್ನಡ ಸಂಘರ್ಷ ಸಮಿತಿ'ಯು ಕಥೆಗಾರ್ತಿ ಅನುಪಮಾ ನಿರಂಜನ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ 2026ನೇ ಸಾಲಿನ ರಾಜ್ಯಮಟ್ಟದ ಮಹಿಳಾ ಕಥಾ ಸ್ಪರ್ಧೆಯಲ್ಲಿ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಕ್ಯಾಂಪಸ್‍ನ ಕನ್ನಡ ವಿಭಾಗದ ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿ ಜ್ಯೋತಿರ್ ಲಕ್ಷ್ಮಿ ಅವರ 'ನೀರವ ಧ್ಯಾನ ವಧೂ'ಕಥೆಯು ಪ್ರಥಮ ಬಹುಮಾನಕ್ಕೆ ಆಯ್ಕೆಯಾಗಿದೆ.
ಇದುವರೆಗೂ ಯಾವುದೇ ಕಥಾ ಸಂಕಲನ ಪ್ರಕಟಿಸದಿರುವ ಮಹಿಳಾ ಬರಹಗಾರರಿಗಾಗಿ 'ಅನುಪಮಾ ನಿರಂಜನ ಮಹಿಳಾ ಕಥಾ ಸ್ಪರ್ಧೆ ಆಯೋಜಿಸಲಾಗಿತ್ತು. ಬಹುಮಾನ ಪಡೆದ ಕಥೆಗಳಿಗೆ ನಗದು ಬಹುಮಾನವಿದ್ದು ಪ್ರಶಸ್ತಿ ಪ್ರದಾನ ಸಮಾರಂಭದ ದಿನಾಂಕ ಮತ್ತು ವಿವರಗಳನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ಕನ್ನಡ ಸಂಘರ್ಷ ಸಮಿತಿ ಅಧ್ಯಕ್ಷ ಎ. ಎಸ್. ನಾಗರಾಜಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


