ಕಾಸರಗೋಡು: ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕøತಿಕ ಬಳಗ (ರಿ.)ದ ಸಾರಥ್ಯದಲಿ ಹಾವೇರಿಯ "ಡಾ. ಅಂಬೇಡ್ಕರ್ ಸಭಾ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾಸರಗೋಡು ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್-ಸಂಧ್ಯಾರಾಣಿ ದಂಪತಿಗೆ " ಕರುನಾಡ ಕನ್ನಡ ಗಡಿನಾಡು ಪೋಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗಡಿನಾಡು ಕಾಸರಗೋಡಿನಲ್ಲಿ ಕಳೆದ 25ವರ್ಷಗಳಿಂದ ನಿರಂತರ ಕನ್ನಡ ಕಾವಲು ಭಟರಾಗಿ, ಕನ್ನಡ ಉಳಿಸಿ ಬೆಳೆಸುವ ಕಾಯಕದಲ್ಲಿ ತನ್ನ ಮನೆಯನ್ನೇ ಕನ್ನಡ ಭವನ ವನ್ನಾಗಿಸಿ ಕನ್ನಡ ಭವನದಲ್ಲಿ ಕರ್ನಾಟಕದಿಂದ ಕಾಸರಗೋಡಿಗೆ ಆಗಮಿಸುವ ಸಾಹಿತ್ಯ ಸಾಂಸ್ಕøತಿಕ ರಾಯಭಾರಿಗಳಿಗೆ ಉಚಿತ ವಸತಿ-ದಾಸೋಹ ನೀಡುವ ಮೂಲಕ ಕನ್ನಡದ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಮಡಿರುವ ಡಾ. ವಾಮನ್‍ರಾವ್ ದಂಪತಿ ಸೇವೆ ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.
ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗ ರಾಜ್ಯಾಧ್ಯಕ್ಷ ಡಾ. ಎಸ್. ಡಿ. ಮುಡೆಣ್ಣವರ, ಕರ್ನಾಟಕ ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ್ ಹೊರಟ್ಟಿ, ಸಮ್ಮೇಳನ ಸರ್ವಾಧ್ಯಕ್ಷ ಜಿ. ಎಮ್ ಓಂಕಾರಣ್ಣನವರ ಮುಂತಾದವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.



