HEALTH TIPS

ಸೇಮ್ ಟು ಸೇಮ್ ಬಂಗಾಳ ಹಾದಿ, ಕೇರಳದಲ್ಲಿ ಗೆದ್ದ 3 ಸ್ಥಾನದ ಹಿಂದಿದೆ ಅಧಿಕಾರದ ಸೀಕ್ರೆಟ್

ತಿರುವನಂತಪುರಂ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಅಸ್ಸಾಂನಲ್ಲಿ ನಿರಾಯಾಸ ಗೆಲುವು ದಾಖಲಿಸಿದರೆ, ಪಶ್ಚಿಮ ಬಂಗಾಳದಲ್ಲಿ ಇತಿಹಾಸ ರಚಿಸಿದೆ. ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆಲುವಿನ ಕೇಕೆ ಹಾಕಿದೆ. ಕೇರಳದಲ್ಲಿ ಬಿಜೆಪಿ ಗೆದ್ದಿರುವುದು ಕೇವಲ 3 ಸ್ಥಾನ ಮಾತ್ರ.

ಆದರೆ ಅಸ್ಥಿತ್ವವೇ ಇಲ್ಲದ ಕೇರಳದಲ್ಲಿ ಬಿಜೆಪಿ 3 ಸ್ಥಾನ ಗೆದ್ದುಕೊಂಡಿದೆ. ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ನೇತೃತ್ವದಲ್ಲಿ 3 ಕ್ಷೇತ್ರದಲ್ಲಿ BJP ಗೆಲುವು ದಾಖಲಿಸಿದೆ. ಕೇರಳದಲ್ಲಿ ಬಿಜೆಪಿ ಬಂಗಾಳದ ಹಾದಿಯಲ್ಲೇ ಸಾಗುತ್ತಿದೆ. ಇದು ಅಧಿಕಾರ ಹಿಡಿಯುವ ಸೀಕ್ರೆಟ್ ಬಿಚ್ಚಿಟ್ಟಿದೆ.

ಕೇರಳದಲ್ಲಿ ಭದ್ರವಾಗಿ ನೆಲೆಯೂರಲು ಬಿಜೆಪಿಯಿಂದ ಗಟ್ಟಿ ಅಡಿಪಾಯ ಹಾಕಿದೆ. ಈ ಬಾರಿಯ ಚುನಾವಣೆಯಲ್ಲಿ ಕೇರಳದಲ್ಲಿ ಬಿಜೆಪಿ ಶೇಕಡಾ 11.5ರಷ್ಟು ಮತ ಪಡೆದು ನೆಲೆ ಗಟ್ಟಿ ಮಾಡಿಕೊಂಡಿದೆ. ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮತ ಗಳಿಸಿದೆ. ಬಂಗಾಳದ ಹಾದಿಯಲ್ಲೇ ಬಿಜೆಪಿ ಕೇರಳದಲ್ಲಿ ರಣತಂತ್ರ ಹೂಡಿದೆ. 2036ರಲ್ಲಿ ಕೇರಳದಲ್ಲೂ ಬಿಜೆಪಿ ಸರ್ಕಾರ ಅರಳುವ ಲಕ್ಷಣ ಸ್ಪಷ್ಟವಾಗಿದೆ. ಇದಕ್ಕೆ ಕಾರಣವೂ ಇದೆ.

3, 77, ನೇರವಾಗಿ ಅಧಿಕಾರ, ಇದು ಬಿಜೆಪಿ ರಣತಂತ್ರ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 2016ರಲ್ಲಿ ಕೇವಲ 3 ಸ್ಥಾನ ಗೆದ್ದುಕೊಂಡಿತ್ತು. ಅಂದು ಬಿಜೆಪಿ ಈ ಗೆಲುವನ್ನು ಸಂಭ್ರಮಿಸಿತ್ತು. ಟಿಎಂಸಿ, ಕಾಂಗ್ರೆಸ್ ಸೇರಿದಂತೆ ಇತರರು ಟೀಕಿಸಿದ್ದರು. ಆದರೆ 2021ರ ವೇಳೆಗೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 77 ಸ್ಥಾನ ಗೆದ್ದು ಸಂಭ್ರಮಿಸಿತ್ತು. ಇದೀಗ ಅಂದರೆ 2026ರ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಮಣಿಸಿದ ಬಿಜೆಪಿ ಅಧಿಕಾರ ಹಿಡಿದಿದೆ. ಇದೇ ಹಾದಿಯಲ್ಲಿ ಇದೀಗ ಕೇರಳದಲ್ಲೂ ಬಿಜೆಪಿ ರಣತಂತ್ರ ಹೂಡಿದೆ. 2026ರಲ್ಲಿ ಕೇರಳದಲ್ಲಿ ಬಿಜೆಪಿ 3 ಸ್ಥಾನ ಗೆದ್ದಿದೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಇತಿಹಾಸ ಬರೆಯುವುದರಲ್ಲಿ ಅನುಮಾನವಿಲ್ಲ.

ರಾಜೀವ್ ಚಂದ್ರಶೇಖರ್ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ವಹಿಸಿಕೊಂಡ ಬಳಿಕ ಬೂತ್ ಮಟ್ಟದಲ್ಲಿ ಬಿಜೆಪಿ ಬಲಗೊಳಿಸಲು ಮುಂದಾಗಿದ್ದಾರೆ. ಇದರ ಫಲವಾಗಿ ಕೇರಳದಲ್ಲಿ ಬಿಜೆಪಿ ಭದ್ರವಾಗಿ ನೆಲೆಯೂರುತ್ತಿದೆ. ಪಕ್ಷ ಸಂಘಟನೆ ಬಲಗೊಳ್ಳುತ್ತಿದೆ. ಕಮ್ಯೂನಿಸ್ಟ್ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ಬಿಜೆಪಿ ಹೊಸ ಅಲೆ ಸೃಷ್ಟಿಸುತ್ತಿದೆ. ಬೆಂಗಳೂರಿನಲ್ಲಿ ಉದ್ಯಮಿಯಾಗಿ ನೆಲೆಯೂರಿದ್ದ ರಾಜೀವ್ ಚಂದ್ರಶೇಖರ್, ಕೇರಳದಲ್ಲಿ ಬಿಜೆಪಿ ಪಕ್ಷ ಕಟ್ಟಲು ಕೇರಳಕ್ಕೆ ಸ್ಥಳಾಂತರಗೊಂಡಿದ್ದರು. ಕೇರಳದ ಪ್ರತಿ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದಾರೆ. ಇದರ ಫಲ ಇದೀಗ ಬಿಜೆಪಿ ಕಾಣುತ್ತಿದೆ. ಕೇರಳದಲ್ಲಿ 3 ಸ್ಥಾನದಿಂದ ಅಧಿಕಾರ ಹಿಡಿಯಲು ಬಿಜೆಪಿಗೆ ಹೆಚ್ಚು ಸಮಯ ಬೇಕಿಲ್ಲ ಅನ್ನೋದು ಬಂಗಾಳ ಸೇರಿದಂತೆ ಇತರ ಹಲವು ರಾಜ್ಯಗಳಲ್ಲಿ ಬಿಜೆಪಿ ಸಾಬೀತು ಮಾಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries