HEALTH TIPS

ಡಾಲರ್‌ ಎದುರು ರೂಪಾಯಿ ಮೌಲ್ಯ 95.39ಕ್ಕೆ ದಾಖಲೆ ಕುಸಿತ

ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಯುದ್ಧದ ಅನಿಶ್ಚಿತತೆ ಮಾರುಕಟ್ಟೆಗಳನ್ನು ತಲ್ಲಣಗೊಳಿಸಿದೆ. ಕದನವಿರಾಮದ ಭರವಸೆ ಮಂದವಾದ ನಂತರ ತೈಲ ಆಮದು ಆರ್ಥಿಕತೆಯಾಗಿರುವ ಭಾರತದಲ್ಲಿ ಮಾರುಕಟ್ಟೆಗಳಿಗೆ ಅಪಾಯದ ಕಳವಳ ಹೆಚ್ಚಿಸಿದ ಕಾರಣ ರೂಪಾಯಿ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ಪ್ರತಿ ಡಾಲರ್ ಗೆ ರೂಪಾಯಿ ಮೌಲ್ಯ 95.39 ರಷ್ಟು ದುರ್ಬಲಗೊಂಡಿದೆ. ದಿನದ ವಹಿವಾಟಿನಲ್ಲಿ ಶೇ 0.3ರಷ್ಟು ಕುಸಿತ ಕಂಡಿದೆ. ಕಳೆದ ಗುರುವಾರ ಅಂದರೆ 2026 ಎಪ್ರಿಲ್ 30ರಂದು ಹಿಂದಿನ ಸಾರ್ವಕಾಲಿಕ ಕನಿಷ್ಠ 95.33 ಕ್ಕಿಂತ ಹೆಚ್ಚು ಹಿನ್ನಡೆ ಕಂಡಿದೆ.

ತೈಲ ಸೂಕ್ಷ್ಮ ಏಷ್ಯನ್ ದೇಶಗಳಾದ ಇಂಡೋನೇಷ್ಯಾದ ರುಪೈಯಾ ಮತ್ತು ಫಿಲಿಪ್ಪೀನ್ ದೇಶದ ಪೆಸೊ ಕೂಡ ದುರ್ಬಲಗೊಂಡಿದೆ. ಗಲ್ಫ್ ದೇಶಗಳಲ್ಲಿ ಯುದ್ಧದ ವಾತಾವರಣವು ಹೂಡಿಕೆದಾರರನ್ನು ಆತಂಕಗೊಳಿಸಿದ್ದು, ಮಾರುಕಟ್ಟೆಯಲ್ಲಿ ಸಂಚಲನ ಮೂಡಿದೆ.

ಮಾಧ್ಯಮ ವರದಿಗಳ ಪ್ರಕಾರ, ಪಶ್ಚಿಮ ಏಷ್ಯಾದಲ್ಲಿ ದೀರ್ಘಾವಧಿಯ ಸಂಘರ್ಷದಿಂದ ಇಂಧನ ಬೆಲೆಗಳು ಏರುವ ಕಾರಣ ಭಾರತದಲ್ಲಿ ಚಾಲ್ತಿ ಖಾತೆ ಕೊರತೆ, ನಿಧಾನಗತಿಯ ಪ್ರಗತಿ ಮತ್ತು ಹಣದುಬ್ಬರಕ್ಕೆ ಕಾರಣವಾಗಲಿದೆ ಎಂದು ಆರ್ಥಿಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಹೂಡಿಕೆದಾರರ ಆತಂಕವು ಬಂಡವಾಳ ಹೊರಹರಿವುಗಳಲ್ಲಿ ಪ್ರತಿಫಲಿಸಿವೆ. ಮಾರ್ಚ್ ಮತ್ತು ಮೇ ನಡುವೆ ಒಟ್ಟು 20 ಬಿಲಿಯನ್ ಡಾಲರ್ ಮೌಲ್ಯದಷ್ಟು ಭಾರತೀಯ ಷೇರುಗಳನ್ನು ವಿದೇಶಿ ಹೂಡಿಕೆದಾರರು ಮಾರಾಟ ಮಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries