HEALTH TIPS

ವಾಡಿಕೆ ಸಮಯದಲ್ಲೇ ಮುಂಗಾರು ಆರಂಭ : ಐಎಂಡಿ

ನವದೆಹಲಿ: ನೈರುತ್ಯ ಮಾನ್ಸೂನ್ ಮೇ 14 ಮತ್ತು 16ರ ನಡುವೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ತಲುಪಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ನಿರೀಕ್ಷಿಸಿದ್ದು, ಇದು ಮುಖ್ಯ ಭೂ ಭಾಗದತ್ತ ಮುಂಗಾರು ಮುನ್ನಡೆಯ ಆರಂಭಿಕ ಹಂತವಾಗಿದೆ. ಕೇರಳದಲ್ಲಿ ಎಂದಿನಂತೆ ಜೂನ್ 1ರ ಸುಮಾರಿಗೆ ಮುಂಗಾರು ಆರಂಭವಾಗುವ ನಿರೀಕ್ಷೆಯಿದೆ ಎಂದು ಐಎಂಡಿ ಹೇಳಿದೆ.

ಮುಂಗಾರು ಮಳೆಯು ಮೇ ಕೊನೆಯ ವಾರದಲ್ಲಿ ಕೇರಳವನ್ನು ಪ್ರವೇಶಿಸಲಿದೆ ಎಂದು ಯುರೋಪಿಯನ್ ಸೆಂಟರ್ ಫಾರ್ ಮೀಡಿಯಂ ರೇಂಜ್ ವೆದರ್ ಫೋರ್‌ಕಾಸ್ಟ್ ನಂತಹ ಅಂತರರಾಷ್ಟ್ರೀಯ ಸಂಸ್ಥೆಗಳು ಸೂಚಿಸಿವೆಯಾದರೂ ಐಎಂಡಿ ಅದನ್ನು ದೃಢಪಡಿಸಿಲ್ಲ.

ಐತಿಹಾಸಿಕವಾಗಿ ಕೇರಳದಲ್ಲಿ ಆರಂಭಗೊಳ್ಳುವ ಮುಂಗಾರು ಸಮುದ್ರದ ಮೇಲ್ಮೈ ತಾಪಮಾನ, ಗಾಳಿಯ ಮಾದರಿಗಳು ಮತ್ತು ವಾಯುಭಾರ ಕುಸಿತದಂತಹ ಅಂಶಗಳಿಂದ ಪ್ರಭಾವಿತಗೊಂಡು ಜುಲೈ ಮಧ್ಯದ ವೇಳೆಗೆ ಇಡೀ ದೇಶವನ್ನು ಆವರಿಸುತ್ತದೆ.

ಮೇ ತಿಂಗಳಿನಲ್ಲಿ ಮಳೆಯ ಸ್ಥಿತಿಗತಿ

ಮೇ ತಿಂಗಳಿನಲ್ಲಿ ಭಾರತದಾದ್ಯಂತ ಮಳೆಯ ಪ್ರಮಾಣವು ಸಾಮಾನ್ಯಕ್ಕಿಂತ ಅಧಿಕವಾಗಿರಲಿದೆ ಮತ್ತು ಕೆಲವು ಪ್ರದೇಶಗಳಲ್ಲಿ ದೀರ್ಘಾವಧಿಯ ಸರಾಸರಿಯ (ಎಲ್‌ಪಿಎ) ಶೇ.110ಕ್ಕೂ ಅಧಿಕ ಮಳೆಯಾಗಲಿದೆ ಎಂದು ಐಎಂಡಿ ನಿರೀಕ್ಷಿಸಿದೆ.

ಭಾರತದ ಪೂರ್ವ, ಈಶಾನ್ಯ ಮತ್ತು ಪೂರ್ವ-ಮಧ್ಯ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಬಹುದು.

ಉಪ-ಹಿಮಾಲಯ ಶ್ರೇಣಿಯ ಪ.ಬಂಗಾಳ, ಸಿಕ್ಕಿಂ ಮತ್ತು ಈಶಾನ್ಯ ಭಾರತದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಪಶ್ಚಿಮ ಹಿಮಾಲಯ ಪ್ರದೇಶ ಮತ್ತು ವಾಯುವ್ಯ ಭಾರತದಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿಯೊಂದಿಗೆ ಚದುರಿದಂತೆ ಮಳೆಯಾಗುವ ಸಾಧ್ಯತೆಯಿದೆ.

ಕೇರಳ ಮತ್ತು ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಪರ್ಯಾಯ ದ್ವೀಪದಲ್ಲಿ ಗುಡುಗು-ಸಿಡಿಲಿನಿಂದ ಕೂಡಿರುವ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries