HEALTH TIPS

ಮಕ್ಕಳ ವಿರುದ್ಧದ ಸೈಬರ್ ಅಪರಾಧ ಹೆಚ್ಚಳ: ಎನ್‌ಸಿಆರ್‌ಬಿ ವರದಿ

ನವದೆಹಲಿ: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ದತ್ತಾಂಶದ ಪ್ರಕಾರ, 2024 ರಲ್ಲಿ ಭಾರತದಲ್ಲಿ ಮಕ್ಕಳ ವಿರುದ್ಧದ ನಡೆದಿರುವ ಪ್ರತಿ 10 ಸೈಬರ್ ಅಪರಾಧಗಳಲ್ಲಿ ಸುಮಾರು 9 ಅಪರಾಧಗಳು ಮಕ್ಕಳನ್ನು ಅಶ್ಲೀಲವಾಗಿ ಚಿತ್ರಿಸುವಂತಹ ವಿಷಯಗಳನ್ನು ಒಳಗೊಂಡಿದೆ.

ದೇಶಾದ್ಯಂತ ಒಟ್ಟಾರೆ ಅಪರಾಧ ಪ್ರಮಾಣದಲ್ಲಿ ಇಳಿಕೆ ಕಂಡುಬಂದರೂ, ಮಕ್ಕಳ ಮೇಲಿನ ಅಪರಾಧಗಳು ಹೆಚ್ಚುತ್ತಲೇ ಇದೆ ಎಂದು ಇತ್ತೀಚಿನ ಎನ್‌ಸಿಆರ್‌ಬಿ ಅಂಕಿಅಂಶಗಳು ತಿಳಿಸಿವೆ.

2023ರಲ್ಲಿ ಭಾರತದಾದ್ಯಂತ ಮಕ್ಕಳ ವಿರುದ್ಧ 1,77,335 ಪ್ರಕರಣಗಳು ದಾಖಲಾಗಿದ್ದರೆ, 2024ರಲ್ಲಿ 1,87,702 ಪ್ರಕರಣಗಳು ದಾಖಲಾಗಿವೆ. ಒಂದು ವರ್ಷದಲ್ಲಿ ಮಕ್ಕಳ ಮೇಲಿನ ಅಪರಾಧ ಪ್ರಕರಣಗಳು ಶೇ 5.8ರಷ್ಟು ಹೆಚ್ಚಾಗಿದೆ.

ಇದಕ್ಕೆ ವ್ಯತಿರಿಕ್ತವಾಗಿ, ಕಳೆದ ನಾಲ್ಕು ವರ್ಷಗಳಲ್ಲಿ ಭಾರತದಲ್ಲಿ ಒಟ್ಟಾರೆ ಅಪರಾಧಗಳ ಪ್ರಮಾಣ ಶೇ 10.8ರಷ್ಟು ಕಡಿಮೆಯಾಗಿದ್ದು, 2020 ರಲ್ಲಿ 66.01 ಲಕ್ಷ ಪ್ರಕರಣಗಳಿತ್ತು. 2024ರಲ್ಲಿ 58.86 ಲಕ್ಷ ಪ್ರಕರಣಗಳಿಗೆ ಇಳಿದಿದೆ. ಇದೇ ಅವಧಿಯಲ್ಲಿ, 2020ರಲ್ಲಿ ಮಕ್ಕಳ ಮೇಲಿನ ಅಪರಾಧಗಳ ಪ್ರಮಾಣ 1,28,531ರಷ್ಟಿತ್ತು. ಅದು 2024ರಲ್ಲಿ 1,87,702 ಕ್ಕೆ ಏರಿಕೆಯಾಗಿದೆ. ನಾಲ್ಕು ವರ್ಷಗಳಲ್ಲಿ ಮಕ್ಕಳ ಮೇಲಿನ ಅಪರಾಧಗಳ ಪ್ರಮಾಣ ಶೇ 46ರಷ್ಟು ಹೆಚ್ಚಾಗಿದ್ದು, ಆತಂಕಕಾರಿ ಏರಿಕೆಯಾಗಿದೆ.

'ಇತ್ತೀಚೆಗಿನ ಸೈಬರ್ ಅಪರಾಧ ಪ್ರವೃತ್ತಿಗಳನ್ನು ಎನ್‌ಸಿಆರ್‌ಬಿ ಅನಾವರಣಗೊಳಿಸಿದ್ದು, ಆನ್‌ಲೈನ್ ವೇದಿಕೆಗಳಲ್ಲಿ ಮಕ್ಕಳ ಸುರಕ್ಷತೆಯು ರಾಷ್ಟ್ರೀಯ ಆದ್ಯತೆಯಾಗಿ ಉಳಿಯಬೇಕು ಎಂಬುದನ್ನು ಒತ್ತಿ ಹೇಳಿದೆ. ಅಲ್ಗಾರಿದಮ್‌ಗಳು ಮತ್ತು ಕೃತಕ ಬುದ್ಧಿಮತ್ತೆಯಿಂದ ಹೆಚ್ಚುತ್ತಿರುವ ಇಂದಿನ ಅತಿ ವೇಗದ ಸಂಪರ್ಕದ ಜಗತ್ತಿನಲ್ಲಿ ಆನ್‌ಲೈನ್‌ನಲ್ಲಿ ಮಕ್ಕಳನ್ನು ರಕ್ಷಿಸುವುದೆಂದರೆ,ಅವರನ್ನು ಕೇವಲ ಸ್ಕ್ರೀನ್‌ ಟೈಮ್‌ನಿಂದ ನಿಯಂತ್ರಿಸುವುದಷ್ಟೇ ಅಲ್ಲ' ಎಂದು ಸಿಆರ್‌ಐ ಕಾರ್ಯಕ್ರಮಗಳ ನಿರ್ದೇಶಕಿ ಸೋಯಾ ಮೊಯಿತ್ರಾ ಹೇಳಿದರು.

ಎನ್‌ಸಿಆರ್‌ಬಿ ದತ್ತಾಂಶವು, ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳು ನಿರಂತರವಾಗಿ ಹೆಚ್ಚುತ್ತಿರುವುದನ್ನು ಎತ್ತಿ ತೋರಿಸುತ್ತದೆ. 2024ರಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ( ಪೊಕ್ಸೊ) ಕಾಯ್ದೆಯಡಿ ಒಟ್ಟು 69,191 ಪ್ರಕರಣಗಳು ದಾಖಲಾಗಿದೆ. ಆ ಪ್ರಕಾರ ಪ್ರತಿ ಒಂದು ಲಕ್ಷ ಮಕ್ಕಳಲ್ಲಿ 15 ಮಕ್ಕಳ ಮೇಲಿನ ಅಪರಾಧ ಪ್ರಕರಣಗಳಾಗಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries