HEALTH TIPS

ಉತ್ತರ ಪ್ರದೇಶ, ದೆಹಲಿ ಸೇರಿದಂತೆ ದೇಶದ ಕೆಲ ಭಾಗಗಳಲ್ಲಿ ತೀವ್ರ ಬಿಸಿಗಾಳಿ: ಐಎಂಡಿ

 ವದೆಹಲಿ: ವಾಯುವ್ಯ, ಮಧ್ಯ ಮತ್ತು ಪೂರ್ವ ಭಾರತದ ಕೆಲವು ಭಾಗಗಳಲ್ಲಿ ಮುಂದಿನ ಆರೇಳು ದಿನಗಳವರೆಗೆ ತೀವ್ರ ಬಿಸಿಗಾಳಿಯ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಎಚ್ಚರಿಸಿದೆ. 


ಮೇ 22 ರಿಂದ ಮೇ 28 ರವರೆಗೆ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಕೆಲವು ಪ್ರದೇಶಗಳಲ್ಲಿ ಬಿಸಿಗಾಳಿಯ ವಾತಾವರಣ ಇರಲಿದೆ.

ಇದೇ ಅವಧಿಯಲ್ಲಿ ಪೂರ್ವ ಉತ್ತರ ಪ್ರದೇಶ ಮತ್ತು ಪೂರ್ವ ಮಧ್ಯಪ್ರದೇಶದಲ್ಲಿ ತೀವ್ರ ಬಿಸಿಗಾಳಿ ಇರಲಿದೆ' ಎಂದು ಅದು ತಿಳಿಸಿದೆ.

'ಮೇ 22ರಿಂದ ಮೇ 28 ರವರೆಗೆ ಪಂಜಾಬ್ ಮತ್ತು ಹರಿಯಾಣ, ಚಂಡೀಗಢ ಹಾಗೂ ದೆಹಲಿಯ ಕೆಲವು ಭಾಗಗಳಲ್ಲಿ ಬಿಸಿಗಾಳಿಯ ವಾತಾವರಣ ದಟ್ಟವಾಗಿದೆ. ಅದೇ ರೀತಿ ಮೇ 24 ಮತ್ತು ಮೇ 27 ರ ನಡುವೆ ಈ ಪ್ರದೇಶಗಳ ಕೆಲವು ಭಾಗಗಳಲ್ಲಿ ತೀವ್ರ ಬಿಸಿಗಾಳಿಯ ಪರಿಸ್ಥಿತಿ ಇರಲಿದೆ' ಎಂದು ಮುನ್ಸೂಚನೆ ನೀಡಿದೆ.

'ಮೇ 22ರಿಂದ 28 ರವರೆಗೆ ರಾಜಸ್ಥಾನದ ಕೆಲವು ಭಾಗಗಳಲ್ಲಿ ಬಿಸಿಗಾಳಿಯ ವಾತಾವರಣ ಇರಲಿದ್ದು, ಮೇ 24ರಿಂದ 28 ರವರೆಗೆ ಪಶ್ಚಿಮ ರಾಜಸ್ಥಾನದ ಕೆಲವು ಭಾಗಗಳಲ್ಲಿ ತೀವ್ರ ಬಿಸಿಗಾಳಿಯ ಪರಿಸ್ಥಿತಿ ಇರಲಿದೆ' ಎಂದು ಹೇಳಿದೆ.

ವಿದರ್ಭ, ಆಂಧ್ರಪ್ರದೇಶದ ಕರಾವಳಿ ಭಾಗ, ಛತ್ತೀಸಗಢ, ಜಾರ್ಖಂಡ್, ಒಡಿಶಾ, ತೆಲಂಗಾಣ, ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಕೆಲವು ಭಾಗಗಳಲ್ಲಿ ಮೇ 22 ರಿಂದ ಮೇ 28 ರ ನಡುವೆ ವಿವಿಧ ದಿನಗಳಲ್ಲಿ ಬಿಸಿಗಾಳಿ ಅಥವಾ ತೀವ್ರ ಬಿಸಿಗಾಳಿ ವಾತಾವರಣ ಇರಲಿದೆ' ಎಂದು ಹೇಳಿದೆ.

ಇದಲ್ಲದೆ, ಮೇ 22 ರಿಂದ ಮೇ 24 ರವರೆಗೆ ಉತ್ತರ ಪ್ರದೇಶ ಮತ್ತು ವಿದರ್ಭದ ಕೆಲವು ಭಾಗಗಳಲ್ಲಿ, ಮೇ 22 ರಿಂದ ಮೇ 26 ರವರೆಗೆ ಒಡಿಶಾದಲ್ಲಿ ಮತ್ತು ಮೇ 22ರಿಂದ ಮೇ 23 ರಂದು ತೆಲಂಗಾಣದಲ್ಲಿ ರಾತ್ರಿಯ ವೇಳೆಯೂ ಉಷ್ಣಾಂಶ ಹೆಚ್ಚುವ ಸಾಧ್ಯತೆಯಿದೆ' ಎಂದು ತಿಳಿಸಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries