HEALTH TIPS

ಪೆರ್ಲ ಪೇಟೆಯಿಂದ ಉಕ್ಕಿನಡ್ಕದವರೆಗೆ ಎಣ್ಮಕಜೆ ಗ್ರಾಮ ಪಂಚಾಯತಿಯಿಂದ ಮಳೆಗಾಲದ ಪೂರ್ವ ಶುಚೀಕರಣ

ಪೆರ್ಲ: ಮಳೆಗಾಲದ ಪೂರ್ವ ಸಿದ್ಧತೆಯಾಗಿ ಎಣ್ಮಕಜೆ  ಗ್ರಾಮ ಪಂಚಾಯತಿ ವತಿಯಿಂದ ಪೆರ್ಲ ಪೇಟೆಯಿಂದ ಉಕ್ಕಿನಡ್ಕದವರೆಗೆ ಶುಕ್ರವಾರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.ಗ್ರಾ.ಪಂ.ಅಧ್ಯಕ್ಷೆ ಕುಸುಮಾವತಿ ಟೀಚರ್ ಉದ್ಘಾಟಿಸಿದರು. ಪಂ.ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಒಳಮೊಗರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಸ್ಥಾಯೀ ಸಮಿತಿ ಅಧ್ಯಕ್ಷರಾದ ರಮ್ಲಾ ಇಬ್ರಾಹಿಂ, ವಿಜಯ ಕೆ., ಪಂ.ಸದಸ್ಯರಾದ ಪ್ರಮೀಳಾ, ಐತ್ತಪ್ಪ ಕುಲಾಲ್, ಪುಷ್ಪಾವತಿ, ಆಯಿಷಾ ಎ.ಎ., ರಾಬಿಯಾ, ಸದಾನಂದ ಶೆಟ್ಟಿ ಕುದ್ವ, ನಳಿನಾಕ್ಷಿ, ಕೃಷ್ಣಪ್ಪ ಬಜಕೂಡ್ಲು, ಜಗದೀಶ್, ಪಂ. ಕಾರ್ಯದರ್ಶಿ ಕೆ. ರಾಧಾಕೃಷ್ಣ, ಸಹಾಯಕ ಕಾರ್ಯದರ್ಶಿ ಟಿ.ಗಿರೀಶ್, ಆರೋಗ್ಯ ನಿರೀಕ್ಷಕ ಬಾಬು ರಾಜ್ ಮೊದಲಾದವರು ಉಪಸ್ಥಿತರಿದ್ದರು. ಹಸಿರು ಕ್ರಿಯಾಸೇನೆಯ ಸದಸ್ಯರು, ಆಶಾ ಕಾರ್ಯಕರ್ತೆಯರು, ಪಂಚಾಯತಿ ಸಿಬ್ಬಂದಿಗಳು, ಕುಟುಂಬ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಶುಚೀಕರಣ ಕಾರ್ಯದಲ್ಲಿ ಕೈ ಜೋಡಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries