ಅಂಗಮಾಲಿ: ಅಂಗಮಾಲಿಯ ಕಿಡಂಗೂರು ಶ್ರೀ ಮಹಾವಿಷ್ಣು ದೇವಸ್ಥಾನದ ಬಳಿ ಆನೆಯೊಂದು ದಾಂಧಲೆ ಸೃಷ್ಟಿಸಿದ ಘಟನೆ ಇಮದು ವರದಿಯಾಗಿದೆ. ತಡೆಯಲು ಪ್ರಯತ್ನಿಸುವಾಗ ಆನೆ ತುಳಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಆನೆಯನ್ನು ತಂದ ಲಾರಿಯ ಚಾಲಕ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.
ಪರಿಸರದ ದೇವಸ್ಥಾನದಲ್ಲಿ ಉತ್ಸವದಲ್ಲಿ ಭಾಗವಹಿಸಿದ ನಂತರ ಆನೆಯನ್ನು ಕಿಡಂಗೂರು ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ತರಲಾಯಿತು. ಆನೆಯನ್ನು ಸ್ನಾನ ಮಾಡಲು ಕರೆದೊಯ್ಯುತ್ತಿದ್ದಾಗ ಅದನ್ನು ಚಾಲಕ ಗದರಿಸಿದ ಎನ್ನಲಾಗಿದೆ.ಇದರಿಂದ ಉದ್ರಿಕ್ತಗೊಂಡ ಆನೆ ಆತನನ್ನು ತುಳಿದು ಸಾಯಿಸಿತು. ಘಟನೆಯಲ್ಲಿ ಮಾವುತನ ಮೇಲೆಯೂ ದಾಳಿ ನಡೆಸಿತು. ಇತರ ಇಬ್ಬರು ಗಾಯಗೊಂಡಿದ್ದಾರೆ. ಆನೆ ತುಳಿದು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಗಾಯಗೊಂಡಿರುವ ಮತ್ತೊಬ್ಬ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಆರ್‍ಆರ್‍ಟಿ ತಂಡ ಸ್ಥಳಕ್ಕೆ ತಲುಪಿದೆ. ಆನೆಯನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ. ಈ ವೇಳೆ ಆನೆ ಅಲ್ಲಿದ್ದ ಕಾರು, ಬೈಕ್ ಸಹಿತ ವಾಹನಗಳನ್ನು ಪುಡಿಗಟ್ಟಿತು. ಬಳಿಕ ವೈದ್ಯರು ಆಗಮಿಸಿ ಅರಿವಳಿಕೆ ನೀಡಿ ಸುಮಾರು ಮೂರು ಗಂಟೆಗಳ ಬಳಿಕ ನಿಯಂತ್ರಣಕ್ಕೆ ತರಲಾಯಿತು.

