HEALTH TIPS

ವರ್ಷಾಂತ್ಯಕ್ಕೆ ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ: ವಾಂಡರ್‌ ಲೇಯನ್‌

ಗೋಥೆನ್‌ಬರ್ಗ್: ಭಾರತ ಮತ್ತು ಐರೋಪ್ಯ ಒಕ್ಕೂಟದ (ಇಯು) ನಡುವಿನ ಮುಕ್ತ ವ್ಯಾಪಾರ ಒಪ್ಪಂದದಿಂದ (ಎಫ್‌ಟಿಎ) ಕೈಗಾರಿಕೋದ್ಯಮಿಗಳು, ಹೂಡಿಕೆದಾರರಿಗೆ ಹೊಸ ಅವಕಾಶಗಳು ದೊರೆಯಲಿವೆ ಎಂದು ಯೂರೋಪಿಯನ್‌ ಆಯೋಗದ ಅಧ್ಯಕ್ಷೆ ಉರ್ಸುಲಾ ವಾಂಡರ್‌ ಲೇಯನ್‌ ಹೇಳಿದ್ದಾರೆ.

ಯುರೋಪಿನ ಪ್ರಮುಖ ಕೈಗಾರಿಕೋದ್ಯಮಿಗಳು ಸಭೆಗೂ ಮುನ್ನ ಪ್ರಧಾನಿ ಮೋದಿ ಮತ್ತು ಸ್ವೀಡನ್ ಪ್ರಧಾನಿ ಉಲ್ಫ್‌ ಕ್ರಿಸ್ಟೆರ್‌ಸನ್ ಅವರೊಂದಿಗೆ ವಾಂಡರ್‌ ಲೇಯನ್‌ ಮಾತುಕತೆ ನಡೆಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಲೇಯನ್‌, 'ಈ ವರ್ಷಾಂತ್ಯದೊಳಗೆ ಭಾರತ-ಐರೋಪ್ಯ ಒಕ್ಕೂಟ (ಇಯು) ನಡುವಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿದ್ದೇವೆ. ಜತೆಗೆ, ದಾಖಲೆಯ ವೇಗದಲ್ಲಿ ಕಾರ್ಯಗತಗೊಳಿಸಲಿದ್ದೇವೆ' ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

'ಭಾರತದ ಜತೆಗಿನ ವ್ಯಾಪಾರ ಒಪ್ಪಂದವು ನಮಗಾಗಿ ಬಾಗಿಲನ್ನು ತೆರೆದಿದೆ. ಹೂಡಿಕೆ ಒಪ್ಪಂದವು ನಮ್ಮನ್ನು ಈ ಬಾಗಿಲಿನ ಮೂಲಕ ಒಳಗೆ ಕರೆದೊಯ್ಯಲಿದೆ' ಎಂದಿದ್ದಾರೆ.

ಇದೇ ವರ್ಷ ಜನವರಿ 27ರಂದು ಮೋದಿ ಅವರು ವಾಂಡರ್‌ ಲೇಯನ್ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಲೂಯಿಸ್ ಸ್ಯಾಂಟೋಸ್ ಅವರಿಗೆ ಆತಿಥ್ಯ ನೀಡಿದ್ದ ಸಂದರ್ಭದಲ್ಲಿ, ಭಾರತ ಮತ್ತು ಇಯು ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ ಅಂತಿಮವಾಗಿದೆ ಎಂದು ಘೋಷಿಸಿದ್ದರು.

17 ಒಪ್ಪಂದಕ್ಕೆ ಸಹಿ

ಭಾರತ ಮತ್ತು ನೆದರ್ಲೆಂಡ್ಸ್‌ ನಡುವೆ ರಕ್ಷಣಾ ಪಾಲುದಾರಿಕೆ ಬಲಗೊಳಿಸಲು, ವಿರಳ ಖನಿಜಗಳು ಮತ್ತು ಇತರ ಮಹತ್ವದ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿಸಲು 17 ಒಪ್ಪಂದಗಳು ಏರ್ಪಟ್ಟಿವೆ.

ಎರಡೂ ದೇಶಗಳ ನಡುವೆ ವ್ಯಾಪಾರ, ಹೂಡಿಕೆ, ಭದ್ರತೆ, ಸೆಮಿಕಂಡಕ್ಟರ್‌, ಬಾಹ್ಯಾಕಾಶ, ಕ್ವಾಂಟಮ್‌ ಕಂಪ್ಯೂಟಿಂಗ್‌ ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಬಂಧ ಬಲಗೊಳ್ಳಲು ಈ ಒಪ್ಪಂದಗಳು ನೆರವಾಗಲಿವೆ.

ನೆದರ್ಲೆಂಡ್ಸ್‌, ಸ್ವೀಡನ್‌, ನಾರ್ವೆ, ಇಟಲಿ ದೇಶಗಳಿಗೆ ನಾಲ್ಕು ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ನೆದರ್ಲೆಂಡ್ಸ್‌ ಪ್ರಧಾನಿ ರಾಬ್‌ ಜೆಟ್ಟೆನ್‌ ಅವರ ಜತೆ ಮಾತುಕತೆ ನಡೆಸಿದ ಬಳಿಕ ಈ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries