ಕಾಸರಗೋಡು: ಯುವಜನತೆಗೆ ರಾಜಕೀಯ ನಾಯಕತ್ವ ಕಲ್ಪಿಸಿಕೊಟ್ಟ ದಿಟ್ಟ ನೇತಾರರಾಗಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಗುರುತಿಸಿಕೊಂಡಿದ್ದರು ಎಂದು ಕಾಂಗ್ರೆಸ್ ಮಂಡಲ ಸಮಿತಿ ಅಧ್ಯಕ್ಷ ಶ್ರೀಧರನ್ ವಯಾಲ್ ತಿಳಿಸಿದ್ದಾರೆ.
ಅವರು ಉದುಮ ಮಂಡಲ ಕಾಂಗ್ರೆಸ್ ಆಯೋಜಿಸಿದ್ದ ರಾಜೀವ್ ಗಾಂಧಿ ಸ್ಮರಣಾರ್ಥ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವಿ. ಭಕ್ತವತ್ಸಲನ್, ಜನಶ್ರೀ ಮಿಷನ್ ಅಧ್ಯಕ್ಷ ಪಿ.ವಿ. ಉದಯಕುಮಾರ್, ಯುಡಿಎಫ್ ಸಂಚಾಲಕ ತೆಕ್ಕೆಕ್ಕರ ಪ್ರಭಾಕರನ್, ಪಿ.ವಿ. ಕೃಷ್ಣನ್, ಸಿ.ಕೆ. ವೇಣುಮಾಸ್ಟರ್, ಮಂಗಳಾವತಿ, ಶ್ರೀಜಾ ಪುರುಷೋತ್ತಮನ್, ಪಿ.ಆರ್.ಚಂದ್ರನ್, ಸುನೀಲಕುಮಾರ್ ಉದುಮ, ಅಬ್ದುಲ್ ಸಲಾಂ, ಪಂತಲ್ ಕೊಟ್ಟನ್‍ಕುಞÂ, ಸುರೇಶ್ ಬೇಕಲ್, ರಾಮಕೃಷ್ಣನ್ ಮೊದಲಾದವರು ಉಪಸ್ಥಿತರಿದ್ದರು. ಮಂಡಲ ಕಾಂಗ್ರೆಸ್ ಪದಾಧಿಕಾರಿಗಳಾದ ಪಂತಲ್ ನಾರಾಯಣನ್ ಸ್ವಾಗತಿಸಿದರು. ಕೆ.ವಿ. ರಾಜಗೋಪಾಲನ್ ವಂದಿಸಿದರು.


