ಕಾಸರಗೋಡು: ಕೇರಳಂ ವಿಧಾನಸಭೆಗೆ ಕಾಸರಗೋಡು ಜಿಲ್ಲೆಯ ವಿವಿಧ ಕ್ಷೇತ್ರಗಳಿಂದ ಆಯ್ಕೆಯಾದ ಸದಸ್ಯರು 16ನೇ ವಿಧಾನಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಕಾಸರಗೋಡು ಕ್ಷೆತ್ರದ ಸದಸ್ಯ ಕಲ್ಲಟ್ರ ಮಾಹಿನ್, ಉದುಮ ಕ್ಷೇತ್ರದ ನೀಲಕಂಠನ್, ಕಾಞಂಗಾಡು ಕ್ಷೇತ್ರದ ಗೋವಿಂದನ್ ಪಳ್ಳಿಕ್ಕಾಪ್ಪಿಲ್ ಮತ್ತು ತ್ರಿಕ್ಕರಿಪುರ ಕ್ಷೇತ್ರದ ಸಂದೀಪ್ ವಾರಿಯರ್ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.


