ಲಂಡನ್ (PTI): ವಿದ್ಯಾರ್ಥಿ ವೀಸಾದಲ್ಲಿ ನಾಲ್ಕು ವರ್ಷಗಳಿಗಾಗಿ ಸ್ಕಾಟ್‌ಲೆಂಡ್‌ಗೆ ತೆರಳಿದ್ದ ಪಿಎಚ್.ಡಿ ವಿದ್ಯಾರ್ಥಿಯಾದ ತಮಿಳುನಾಡಿನ ಕ್ಯೂ. ಮಣಿವಣ್ಣನ್ ಈಗ ಸ್ಕಾಟ್‌ಲೆಂಡ್‌ನ ಸಂಸದರಾಗಿ ಆಯ್ಕೆಯಾಗಿದ್ದಾರೆ.
'ನನ್ನ ಹೆಸರು ಡಾ. ಕ್ಯೂ. ಮಣಿವಣ್ಣನ್. ನಾನು ತಮಿಳುನಾಡಿನಿಂದ ವಲಸೆ ಬಂದಿರುವ ಲಿಂಗತ್ವ ಅಲ್ಪಸಂಖ್ಯಾತ.
ನನ್ನನ್ನು ಅವರು ಎಂದು ಕರೆಯಲಾಗುತ್ತದೆ' ಎಂದು ಜನರ ಮುಂದೆ ತನ್ನನ್ನು ಪರಿಚಯಿಸಿಕೊಳ್ಳುತ್ತಾ ವಲಸೆ, ಅಸ್ಮಿತೆ ಕುರಿತಾಗಿ ಮಾತನಾಡಿದ್ದ ಮಣಿವಣ್ಣನ್, ಜನರ ಮೆಚ್ಚುಗೆ ಪಡೆದರು.

