ಕಾಸರಗೋಡು: ನಗರದ ಕೇಳುಗುಡ್ಡೆ ಅಯ್ಯಪ್ಪನಗರ ಶ್ರೀ ಶಾಸ್ತಾ ಆಟ್ರ್ಸ್ ಅಂಡ್ ಸ್ಪೋಟ್ರ್ಸ್ ಕ್ಲಬ್ (ರಿ ) ಹಾಗೂ ಮಂಗಳೂರುಪದವಿನಂಗಡಿ ಕಂಪನಿಯೋ ಲೈಫ್ ಕೇರ್ ವೆಲ್ನೆಸ್ ಸೆಂಟರ್‍ನ ಜಂಟಿ ಆಶ್ರಯದಲ್ಲಿ ಉಚಿತ ಫುಟ್‍ಪಲ್ಸ್ ಥೆರಪಿ ಕಾರ್ಯಕ್ರಮ ಕೇಳುಗುಡ್ಡೆ ದೀನದಯಾಳ್ ಕಮ್ಯೂನಿಟಿ ಸಭಾಂಗಣದಲ್ಲಿ ಆರಂಭಗೊಂಡಿತು.
ಮಧುಮೇಹ ಕಾಯಿಲೆಯಿಂದ ಬರುವ ಪಾದದ ಉರಿ ಹಾಗೂ ಕಾಲುನೋವು ನಿವಾರಣೆ ಮಾಂಸ ಖಂಡಗಳ ಸೆಳೆತದಿಂದ ಮುಕ್ತಿ ಮತ್ತು ರಕ್ತ ಪರಿಚಾಲನೆ ಮತ್ತು ನರಗಳ ಯಾವುದೇ ವಿವಿಧ ಸರಳ ಮತ್ತು ದೀರ್ಘ ಕಾಲಿನ ಸಮಸ್ಯೆಗಳನ್ನು ಔಷಧಿ ರಹಿತವಾಗಿ ಅಡ್ಡ ಪರಿಣಾಮವಿಲ್ಲದೆ ನಿವಾರಿಸುವ ನಿಟ್ಟಿನಲ್ಲಿ ಥೆರಪಿ ಕಾರ್ಯಕ್ರಮಾಯೋಜಿಸ¯ಗಿತ್ತು.
ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ದೇಶಾದ್ಯಂತ 350 ಶಾಖೆಗಳನ್ನು ಹೊಂದಿರುವ ಹಾಗೆಯೇ 10 ಲಕ್ಷಕ್ಕಿಂತ ಹೆಚ್ಚಿನ ಜನರು ಪರಿಹಾರ ಕಂಡುಕೊಂಡಿಧಾರೆ ಅರ್ಧ ತಲೆನೋವು, ಪಾದದಲ್ಲಿ ಉರಿ, ಪಾದದಲ್ಲಿ ನೋವು, ಥೈರೊಯ್ಡ್, ಕಾಲು ಜೋಮು, ವೆರಿಕೋಸ್ ವೇನ್, ಕಾಲಿನಲ್ಲಿ ಬಾವು, ಮಂಡಿನೋವು, ನಿದ್ರಾ ಹೀನತೆ, ಕಾಲು ನೋವು ,ಸ್ಟ್ರೋಕ್, ಸೊಂಟ ನೋವು, ಪಿರಿಯಡ್ಸ್ ಸಮಸ್ಯೆಗಳಿಗೆ ಥೆರಪಿ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ. ಉಚಿತ ಫುಟ್ ಪಲ್ಸ್ ಥೆರಪಿ ಕೇಳುಗುಡ್ಡೆಯ ಕಮ್ಯುನಿಟಿಟಿ ಹಾಲ್ ನಲ್ಲಿ ಮೇ 23ರ ವರೆಗೆ ನಡೆಯಲಿರುವುದಾಗಿ ಪ್ರಕಟಣೆ ತಿಳಿಸಿದೆ.

