ಕಾಸರಗೋಡು: ವಿಷ ಸೇವಿಸಿ ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ನವವಧು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅಂಬಲತ್ತರ ಪರಕ್ಲಾಯಿ ಚಿಟ್ಟಕ್ಕಾವು ನಿವಾಸಿ ರೂಪೇಶ್ ಅವರ ಪತ್ನಿ ಅಶ್ವತಿ(25)ಸಾವಿಗೀಡಾದ ಗೃಹಿಣಿ. ಅಶ್ವತಿ ಹಾಗೂ ರೂಪೇಶ್ ಅವರ ವಿವಾಹ 2026ರ ಏ. 25ರಂದು ನೆರವೇರಿತ್ತು. ಈಕೆ ಬೇಡಡ್ಕ ಕುತ್ತಿಕ್ಕೋಲ್ ಬೇತೂರ್‍ಪಾರದ ವಟ್ಟಂತಟ್ಟ ನಿವಾಸಿ, ದಿ. ಸುಗು-ಪುಷ್ಪಲತಾ ದಂಪತಿ ಪುತ್ರಿ. ಮೇ 18ರಂದು ಕಾಸರಗೋಡಿನ ತನ್ನ ವಾಸಸ್ಥಳದಲ್ಲಿ ವಿಷ ಸೇವಿಸಿ ಗಂಭೀರಾವಸ್ಥೆಯಲ್ಲಿ ಕಂಡುಬಂದಿದ್ದ ಅಶ್ವತಿ ಅವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಕರಣದ ಬಗ್ಗೆ ಕಾಸರಗೋಡು ನಗರಠಾನೆ ಪೊಲೀಸರು ಕೇಸು ದಾಖಲಿಸಿಕೊಮಡಿದ್ದಾರೆ.


