ಕಾಸರಗೋಡು: ನವ ವಧುವಿನ ಮೃತದೇಹ ಪತಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಳಿಪರಂಬ ಕರಿಂಬತ್‍ನ ಆಕಾಶ್ ಮೋಹನ್ ಎಂಬವರ ಪತ್ನಿ ಸಾಂದ್ರತಾರಾ (22) ಮೃತಪಟ್ಟ ಗೃಹಿಣಿ.
ನಾಟ್ಯತರಬೇತಿ ಶಿಕ್ಷಕಿಯಾಗಿದ್ದ ಸಾಂದ್ರತಾರಾ ಮೃತದೇಹ ಪತಿ ಮನೆಯ ಬೆಡ್‍ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಾಲ್ಕು ತಿಂಗಳ ಹಿಂದೆ ಸಾಂದ್ರತಾರಾ ಹಾಗೂ ಆಕಾಶ್‍ಮೋಹನ್‍ರ ವಿವಾಹ ನಡೆದಿದ್ದು, ಈ ಹಿಂದೆ ಪರಶ್ಶಿನಿ ತಳಿಯಿಲ್ ಎಂಬಲ್ಲಿ ವಾಸಿಸುತ್ತಿದ್ದ ಇವರು ಪ್ರಸಕ್ತ ಬಾವುಪರಂಬ್ ಎಂಬಲ್ಲಿ ವಾಸ್ತವ್ಯ ಹೂಡಿದ್ದರು. ತಳಿಪರಂಬ ಠಾಣೆ ಪೋಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


