ಕರಾಚಿ/ ದುಬೈ : ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗಾಗಿ ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನವು, ಯುದ್ಧದ ಅಂತ್ಯಕ್ಕೆ ಸಂಬಂಧಿಸಿದ ಇರಾನ್‌ನ ಪರಿಷ್ಕೃತ ಪ್ರಸ್ತಾವಗಳನ್ನು ಅಮೆರಿಕದ ಮುಂದಿಟ್ಟಿದೆ ಎಂದು ಪಾಕಿಸ್ತಾನದ ಮೂಲಗಳು ತಿಳಿಸಿವೆ.
ಬಳಿಕ ಇರಾನ್‌ನ ವಿದೇಶಾಂಗ ವ್ಯವಹಾರಗಳ ವಕ್ತಾರ ಇಸ್ಮಾಯಿಲ್ ಬಾಘೈ ಅವರು, 'ಇರಾನ್‌ನ ನಿಲುವುಗಳನ್ನು ಪಾಕಿಸ್ತಾನದ ಮೂಲಕ ಅಮೆರಿಕಕ್ಕೆ ತಲುಪಿಸಲಾಗಿದೆ' ಎಂದು ಖಚಿತಪಡಿಸಿದ್ದಾರೆ.
ಆದರೆ ಹೆಚ್ಚಿನ ಮಾಹಿತಿಯನ್ನು ಅವರು ನೀಡಿಲ್ಲ.
ಆರು ವಾರಗಳ ಯುದ್ಧದ ಬಳಿಕ ಇರಾನ್ ಮತ್ತು ಅಮೆರಿಕ ಮಧ್ಯೆ ಕದನ ವಿರಾಮ ಘೋಷಣೆಯಾಗಿದೆ. ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಮಾತುಕತೆಯು ಅರ್ಧಕ್ಕೆ ಮೊಟಕುಗೊಂಡಿದೆ.

