ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ)ಯ 'ಎಕ್ಸ್' ಖಾತೆ ಮೇಲಿನ ನಿರ್ಬಂಧವನ್ನು ತೆಗೆದು ಹಾಕುವಂತೆ ಆದೇಶಿಸಲು ದೆಹಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿತು.
'ಸಿಜೆಪಿಯ 'ಎಕ್ಸ್' ಖಾತೆ ಮೇಲೆ ವಿಧಿಸಿರುವ ನಿರ್ಬಂಧವನ್ನು ತೆಗೆದು ಹಾಕುವ ಕುರಿತಂತೆ ಮಾಹಿತಿ ತಂತ್ರಜ್ಞಾನ ನಿಯಮಗಳಡಿ ರಚಿಸಿದ ಪರಿಶೀಲನಾ ಸಮಿತಿಯು ಪರಾಮರ್ಶೆ ನಡೆಸಿ, ಜುಲೈ 7ರ ಒಳಗಾಗಿ ನಿರ್ಧಾರ ಪ್ರಕಟಿಸಬೇಕು' ಎಂದು ಹೈಕೋರ್ಟ್ ಸೂಚಿಸಿದೆ.
ಈ ಕುರಿತ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪುಷ್ಪೇಂದ್ರಕುಮಾರ್ ಕೌರವ ಅವರ ಪೀಠವು, ಪರಿಶೀಲನಾ ಸಮಿತಿ ನಡೆಸುವ ವಿಚಾರಣೆಗೆ ವರ್ಚುವಲ್ ವಿಧಾನದ ಮೂಲಕ ಹಾಜರಾಗುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರಿಗೆ ಅನುಮತಿ ನೀಡಿತು.
'ಸಿಜೆಪಿಯ ಖಾತೆಯ ಮೇಲಿನ ನಿರ್ಬಂಧವನ್ನು ತೆರವು ಮಾಡುವುದಕ್ಕೆ ಸಮಿತಿ ಸಹಮತ ವ್ಯಕ್ತಪಡಿಸಿದಲ್ಲಿ, ಆಗ, ಈ ಕುರಿತು ಆದೇಶ ಹೊರಡಸಬಹುದು' ಎಂದು ನ್ಯಾಯಾಧೀಶರು ಹೇಳಿದರು.
ದೀಪ್ಕೆ ಸಲ್ಲಿಸಿರುವ ಅರ್ಜಿ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರ ಹಾಗೂ ಸಾಮಾಜಿಕ ಮಾಧ್ಯಮ 'ಎಕ್ಸ್'ಗೆ ನೋಟಿಸ್ ಜಾರಿ ಮಾಡಿದ ಪೀಠವು, ವಿಚಾರಣೆಯನ್ನು ಜುಲೈ 7ಕ್ಕೆ ಮುಂದೂಡಿತು.

