HEALTH TIPS

ಸುಬೇದಾರ್ ಸಂಪತ್ ಕುಮಾರ್ ರಿಗೆ ಅಭಿನಂದನೆ

ಮುಳ್ಳೇರಿಯ: ಅಡೂರಿನ ವಿಧ್ಯಾಭಾರತಿ ವಿದ್ಯಾಲಯ ಹಾಗೂ ಶ್ರೀ ರಾಮೋತ್ಸವ ಸಮಿತಿಯ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಭಾರತೀಯ ಭೂಸೇನೆಯಲ್ಲಿ 30 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಸುಬೇದಾರ್ ಸಂಪತ್ ಕುಮಾರ್ ಕೆ. ಅವರನ್ನು ಅಭಿನಂದಿಸಲಾಯಿತು. 


ಅಡೂರಿನ ವಿದ್ಯಾಭಾರತಿ ವಿದ್ಯಾಲಯದ ಸಭಾಂಗಣದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಸತ್ಯಪ್ರೇಮಾ ಭಾರಿತ್ತಾಯ ವಹಿಸಿದ್ದರು. ಡಾ. ಶ್ರೀನಿಧಿ ಸರಳಾಯ ಬದಿಯಡ್ಕ ಅವರು ಸುಬೇದಾರ್ ಸಂಪತ್ ಕುಮಾರ್ ಅವರ ಅಭಿನಂದನಾ ಭಾಷಣ ಮಾಡಿದರು. ಕಾರ್ಯಕ್ರಮವನ್ನು ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿ ಸಾರ್ಜೆಂಟ್ ಬಾಲಚಂದ್ರ ಕೇಕುಣ್ಣಾಯ ದೀಪ ಬೆಳಗಿಸಿ ಉದ್ಘಾಟಿಸಿದರು. ಸಭೆಯಲ್ಲಿ ಸಾಮಾಜಿಕ ಮುಖಂಡರಾದ ಅಪ್ಪಕುಂಞ ಮಾಸ್ತರ್, ರಾಜಾರಾಮ ಸರಳಾಯ, ರಾಧಾಕೃಷ್ಣ ಮೇರ್ಟ, ಲಕ್ಷ್ಮಣ ಪೊನಾರಂ ಮೊದಲಾದವರು ಇದ್ದರು. ಕಾರ್ಯಕ್ರಮದಲ್ಲಿ 24 ಗಂಟೆಗಳ ಕಾಲ ಕೂಚುಪ್ಪುಡಿ ನೃತ್ಯ ಪ್ರದರ್ಶನ ನೀಡಿ ಗೋಲ್ಡನ್ ಬುಕ್ ಅಫ್ ವಲ್ರ್ಡ್ ರೆಕಾರ್ಡ್ ಸಾಧನೆ ಮಾಡಿದ ಅಭಿಷೇಕ್ ಕಣೆಮಾರಡ್ಕ ಅವರನ್ನು ಅಭಿನಂದಿಸಲಾಯಿತು. ಶ್ರೀಶಾರದಾದೇವಿ ಅಭಿನಂದನಾ ಭಾಷಣ ಮಾಡಿದರು. ವೆಂಕಟ್ರಾಜ್ ಸ್ವಾಗತಿಸಿ, ಗಣೇಶ ಒ. ವಂದಿಸಿದರು. ಬಾಲಸುಬ್ರಹ್ಮಣ್ಯ ಭಟ್ ಬೈತನಡ್ಕ ನಿರೂಪಿಸಿದರು.  ಈ ಸಂದರ್ಭದಲ್ಲಿ ಅಡೂರಿನ ಅನೇಕ ಸಂಘಟನೆಗಳ ವತಿಯಿಂದ ಸುಬೇದಾರ್ ಸಂಪತ್ ಕುಮಾರ್ ಹಾಗೂ ಅಭಿಷೇಕ್ ಕಣೆಮಾರಡ್ಕ ಅವರನ್ನು ಅಭಿನಂದಿಸಲಾಯಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries