ಕಾಸರಗೋಡು: ಏಳು ವರ್ಷದ ಪುತ್ರಿಯೊಂದದಿಗೆ ಅಂಗಡಿ ಕೆಲಸಕ್ಕೆಂದು ತೆರಳಿದ ಗೃಹಿಣಿ ನಾಪತ್ತೆಯಾಗಿರುವ ಬಗ್ಗೆ ಬೇಕಲ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಬೇಕಲ ಬೀಚ್ ರಸ್ತೆಯ ರಮಣಿ ನಿಲಯದ ಎಸ್. ಪ್ರದೀಪ್ ಅವರ ಪತ್ನಿ ಬೇಬಿ (40) ಹಾಗೂ ಏಳು ವರ್ಷದ ಪುತ್ರಿ ನಾಪತ್ತೆಯಾದವರು. ಭಾನುವಾರ ಬೆಳಗ್ಗೆ ಬೇಬಿ ತನ್ನ ಪುತ್ರಿಯನ್ನು ಕರೆದುಕೊಂಡು ಮನೆಯಿಂದ ಹೊರಟಿದ್ದು, ಸಂಜೆಯಾದರೂ ವಾಪಸಾಗಿಲ್ಲ. ಬೇಬಿ ತಳಿಪರಂಬ ನಿವಾಸಿ ಬೈಜು ಎಂಬಾತನ ಜೊತೆ ತೆರಳಿರುವ ಶಂಕೆ ವ್ಯಕ್ತಪಡಿಸಿದ್ದು, ಈ ಬಗ್ಗೆ ಪತಿ ಬೇಕಲ ಠಾಣೆ ಪೋಲೀಸರಿಗೆ ನೀಡಿದ ದುರಿನಲ್ಲಿ ತಿಳಿಸಿದ್ದಾರೆ.


