ಕಾಸರಗೋಡು: ಮಾಯಿಪ್ಪಾಡಿಗುತ್ತು ತರವಾಡು ಮನೆಯಲ್ಲಿ ಶ್ರೀ ಧೂಮಾವತಿ ದೈವದ ಧರ್ಮನೇಮ ಮತ್ತು ಶ್ರೀ ಕೊರತಿ ದೈವದ ಕೋಲಗಳು ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಿತು. ಗಣಹೋಮ, ತಂಬಿಲ, ಪಾನಕಪೂಜೆ, ಮಾಯಿಪ್ಪಾಡಿ ಶ್ರೀ ದುರ್ಗಾ ಮಹಿಳಾ ಭಜನಾ ಸಂಘ, ಮಾಯಿಪ್ಪಾಡಿ ಶ್ರೀ ರಾಜರಾಜೇಶ್ವರಿ ಭಜನಾ ಸಂಘ ಮತ್ತು ಮಾಯಿಪಾಡಿಗುತ್ತು ಕುಟುಂಬಸ್ಥರಿಂದ ಭಜನಾ ಕಾರ್ಯಕ್ರಮ ನಡೆಯಿತು.
ನಂತರ ಪುತ್ತೂರುಕೊಟ್ಯದಿಂದ ಮಾಯಿಪ್ಪಾಡಿಗುತ್ತು ತರವಾಡಿಗೆ ಭಂಡಾರದ ಆಗಮನ, ಶ್ರೀ ಧೂಮಾವತಿ ದೈವದ ಧರ್ಮನೇಮ, ಕೊರತಿದೈವದ ಕೋಲ ನಡೆಯಿತು. ಎರಡು ಹರಕೆಯ ಕೊರತಿಕೋಲ ಸೇರಿದಂತೆ ಮೂರು ದಿನಗಳ ಕಾಲ ದೈವಗಳ ನೇಮೋತ್ಸವ ನಡೆಯಿತು.


