HEALTH TIPS

ಸಾರ್ವಜನಿಕ ಸ್ಥಳದ ಮರ ತೆರವು : ಪೊಲೀಸ್ ಕೇಸು ದಾಖಲು

 ಕಾಸರಗೋಡು:  ಬೇಕಲ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಪನಯಾಲ್‌ನಲ್ಲಿ ಲೋಕೋಪಯೋಗಿ ರಸ್ತೆ ಬದಿಯ 100ರಷ್ಟು ಮರಗಳನ್ನು ಜೆಸಿಬಿ ಉಪಯೋಗಿಸಿ ಕಡಿದು ತೆರವುಗೊಳಿಸಿದ ಘಟನೆಯಲ್ಲಿ ಪೊಲೀಸರು ಕೇಸು ದಾಖಲಿಸಿದ್ದಾರೆ. ಕಾಞಂಗಾಡ್ ಲೋಕೋಪಯೋಗಿ ಕಚೇರಿಯ ಅಸಿಸ್ಟೆಂಟ್ ಇಂಜಿನಿಯರ್‌ರ ದೂರಿನಂತೆ ಪಳ್ಳಾರ್ ನಿವಾಸಿ ವಿನಾಯಕ ಭಟ್ ವಿರುದ್ಧ ಬೇಕಲ ಪೊಲೀಸರು ಕೇಸು ದಾಖಲಿಸಿದ್ದಾರೆ.


ಪೆರಿಯಾಟಡ್ಕಂ- ಬೇಕಲ ರಸ್ತೆಯ ಪನಯಾಲ್, ಪಳ್ಳೋರತ್‌ನಲ್ಲಿದ್ದ ಹಲವಾರು ಮರಗಳನ್ನು  ಜೆಸಿಬಿ ಉಪಯೋಗಿಸಿ ಕಡಿದು ನಾಶಪಡಿಸಿ ಸರಕಾರಕ್ಕೆ ಲಕ್ಷ ರೂ.ಗಳ ನಷ್ಟ ಉಂಟುಮಾಡಿರುವುದಾಗಿ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ. ಬುಧವಾರ ಬೆಳಿಗ್ಗೆ ಮರಗಳನ್ನು ನಾಶಪಡಿಸಿದ ವಿಷಯ ಸ್ಥಳೀಯರ ಗಮನಕ್ಕೆ ಬಂದಿತ್ತು. ಮಹಾಗನಿ, ಊರಿನ ಮಾವಿನ ಮರಗಳು ಮೊದಲಾದ ಮರಗಳನ್ನು ಕಡಿದು ತೆರವುಗೊಳಿಸಲಾಗಿತ್ತು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries