ಕಾಸರಗೋಡು: ಕೂಡ್ಲು ರಾಮದಾಸನಗರ ಕಾಳ್ಳಾಂಗಾಡಿನಲ್ಲಿರುವ ಬಾರಿಕ್ಕಾಡು ಅಂಜಾರಿಲ್ಲಂ ತರವಾಡಿನ ನವೀಕೃತ ತರವಾಡು ಮನೆಯ ಗೃಹ ಪ್ರವೇಶ, ಕೊರತ್ತಿಯಮ್ಮ ಹಾಗೂ ಗುಳಿಗ ದೈವಗಳ ಪುನರ್ ಪ್ರತಿಷ್ಠಾ ಕಲಶಾಭಿಷೇಕವು ಮೇ 17 ರಿಂದ 19ರ ತನಕ ತಂತ್ರಿವರ್ಯರಾದ ಬ್ರಹ್ಮ ಶ್ರೀ ಉಳಿಯತ್ತಾಯ ವಿಷ್ಣು ಆಸ್ರರವರ ನೇತೃತ್ವದಲ್ಲಿ ಜರಗಲಿದೆ.
17 ರಂದು ಸಂಜೆ 5.30ಕ್ಕೆ ತಂತ್ರಿವರ್ಯರಿಗೆ ಪೂರ್ಣಕುಂಭ ಸ್ವಾಗತ, ದೇವತಾ ಪ್ರಾರ್ಥನೆ, ವಾಸ್ತು ಪೂಜೆ, ವಾಸ್ತು ಬಲಿ, 18 ರಂದು ಬೆಳಿಗ್ಗೆ 8 ರಿಂದ ಗಣಪತಿ ಹೋಮ, 10ಕ್ಕೆ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರಿಗೆ ಪೂರ್ಣಕುಂಭಸ್ವಾಗತ, ಬೆಳಗ್ಗೆ 10ರಿಂದ 11.32ರ ಮಧ್ಯೆ ನಡೆಯುವ ಕರ್ಕಾಟಕ ಲಗ್ನ ಶುಭಮುಹೂರ್ತದಲ್ಲಿ ನವೀಕೃತ ತರವಾಡು ಮನೆಯ ಗೃಹ ಪ್ರವೇಶ ಮತ್ತು ಕೊರತ್ತಿಯಮ್ಮ, ಗುಳಿಗ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ, ನಾಗತಂಬಿಲ, ನಡೆಯುವುದು.
11.45ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಗಳು ಆಶೀರ್ವಚನ ನಿಡುವರು. ತಂತ್ರಿವರ್ಯರಾದ ಬ್ರಹ್ಮ ಶ್ರೀ ಉಳಿಯತ್ತಾಯ ವಿಷ್ಣು ಆಸ್ರರು ಉದ್ಘಾಟಿಸುವರು. ರಾಜ್ಯ ಸಭಾ ಸದಸ್ಯ ಡಾ. ಕೆ. ನಾರಾಯಣ ಬೆಂಗಳೂರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.. ತೆರುವತ್ ಶ್ರೀ ಚೀರುಂಭಾ ಭಗವತೀ ಕ್ಷೇತ್ರದ ಸ್ಥಾನಿಕ ಗಣೇಶ ಮಡೆಯ, ವೇಣುಗೋಪಾಲನ್ (ಭಾಮ), ಸರೋಜಿನಿ ಗೋವರ್ಧನ್ ಅತಿಥಿಗಳಾಗಿ ಭಾಗವಹಿಸುವರು. ದೈವಜ್ಞರಾದ ಬಾಲಕೃಷ್ಣ ಮುನಿಕ್ಕಲ್, ರತೀಶ್ ನೀಲೇಶ್ವರ, ಶಿಲ್ಪಿ ವಾಮನ ಕೊಳತ್ತೂರು, ಸಿವಿಲ್ ಇಂಜಿನಿಯರ್ ಬಿ. ಲೋಕೇಶ್ ಶೆಟ್ಟಿ ಎಂಬಿವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಮಧ್ಯಾಹ್ನ 2ರಿಂದ ಭಜನೆ, ಸಂಜೆ 5.30 ರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯುವುದು.
19 ರಂದು ಬೆಳಗ್ಗೆ 9 ರಿಂದ ಕುಣಿತ ಭಜನೆ, 10.30 ರಿಂದ ಕೊರತ್ತಿಯಮ್ಮನ ಕೋಲ, ಅಪರಾಹ್ನ 1 ರಿಂದ ಅನ್ನಸಂತರ್ಪಣೆ, ನಂತರ ಗುಳಿಗ ದೈವದ ಕೋಲ ನಡೆಯುವುದು.

