HEALTH TIPS

ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ 'ಶನಿ ನಮನ-ತಾಪ ಶಮನ ವಿಶಿಷ್ಟ ಕಾರ್ಯಕ್ರಮಕ್ಕೆ ಚಾಲನೆ

ಪೆರ್ಲ: ಶ್ರೀ ಸಂಸ್ಥಾನ ಗೋಕರ್ಣದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ  ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದೊಂದಿಗೆ ಚಟುವಟಿಕೆ ನಡೆಸುತ್ತಿರುವ ಕಾಸರಗೋಡು ತಾಲೂಕು ಬದಿಯಡ್ಕ ಹೋಬಳಿಯ ಪೆರ್ಲ ಸನಿಹದ ಬಜಕೂಡ್ಲು ಅಮೃತಧಾರಾ ಗೋಶಾಲೆ, ಗೋಲೋಕದಲ್ಲಿ ವಿಶಿಷ್ಟ ಕಾರ್ಯಕ್ರಮ  'ಶನಿ ನಮನ-ತಾಪ ಶಮನ' (ಶನಿಜಯಂತಿಯ ಪುಣ್ಯಪರ್ವ)ಕಾರ್ಯಕ್ರಮ ಶನಿವಾರ ಆರಂಭಗೊಂಡಿತು.


ಶಂಕರಾಚಾರ್ಯ  ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ  ದಿವ್ಯಾಶೀರ್ವಾದ ಹಾಗೂ ಮಾರ್ಗದರ್ಶನದೊಂದಿಗೆ ಈ ಅಪೂರ್ವ ಕಾರ್ಯಕ್ರಮ ನಡೆದುಬರುತ್ತಿದೆ.      ಬೆಳಗ್ಗೆ 4.30ಕ್ಕೆ ಗುರು ವಂದನೆ, ದೇವತಾ ಪ್ರಾರ್ಥನೆ, ಸ್ನಾನ, ಸಂಕಲ್ಪ, ಗೋಪೂಜೆ  ಶ್ರೀ ಮಹಾಗಣಪತಿ ಹವನ ಸಹಿತ ಜಲಾಭಿಷೇಕ, ಶ್ರೀ ಗೋಪಾಲಕೃಷ್ಣ ಪೂಜೆ, ಗೋಸ್ತುತಿ, ಗೋಪೂಜೆ,  ಶ್ರೀ ಮಹಾಗಣಪತಿ ಹವನ, ಪೂರ್ಣಾಹುತಿ, ಕನ್ಯಾ ಪೂಜೆ ನೆರವೇರಿತು. ನಂತರ  ಶ್ರೀ ಹನುಮಚ್ಚಾಲೀಸಾ ಸ್ತೋತ್ರ ಪಾರಾಯಣ, ಶ್ರೀ ಹನುಮಾನ್ ಚಾಲೀಸಾ ಪಾರಾಯಣ, ಶ್ರೀ ಕ್ಷೇತ್ರೋತ್ಸವ ನಡೆಯಿತು. 

17ರಂದು ಬೆಳಗ್ಗೆ 6.06 ಶ್ರೀ ಮಹಾಗಣಪತಿ ಸ್ಫೂರ್ತಿಸಹಿತ ಅಲಂಕಾರ ಪಾರಾಯಣ ನಡೆಯುವುದು. ಲೋಕ ಕಲ್ಯಾಣಾರ್ಥ  ಲೋಕಾಲಂಕಾರ ಶ್ರೀ ಸುಬ್ರಹ್ಮಣ್ಯಸ್ಫೂರ್ತಿ ಸಹಿತ ಪದ್ಮ ಇಷ್ಟಪೂಜ್ಯ ಅನ್ನಿಷ್ಠ ಪರಿಹಾರಾರ್ಥಿಗಳಿಗೆ ಗುರು ಹಾಗೂ ಶನಿಯ ಪರಮಪೂಜ್ಯ ಪ್ರಾಪ್ತಿಗಾಗಿ ಹಾಗೂ ಲೋಕದ ಶಾಂತ ಸಮೃದ್ಧಿಗಾಗಿ ಗೋಮಾತೆಯ ಪವಿತ್ರ ಸನ್ನಿಧಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 


ಬಿರುಸನ ಮಳೆ:

ಗೋಶಾಲೆಯಲ್ಲಿ ಕಾರ್ಯಕ್ರಮ ಆರಂಭಗೊಳ್ಳುತ್ತಿದ್ದಂತೆ ಬಿರುಸಿನ ಮಳೆಯಾಗುವ ಮೂಲಕ ಇಳೆ ತಂಪಾಯಿತು. ಬಜಕೂಡ್ಲ ಸ್ಟೇಡಿಯಂ ವಠಾರದಲ್ಲಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಅಲ್ಲಿಂದ ಪ್ರತ್ಯೇಕ ವಾಹನಗಳಲ್ಲಿ ಜನರನ್ನು ಗೋಶಾಲೆ ಸಮುಚ್ಛಯಕ್ಕೆ ಕರೆದೊಯ್ಯಲಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries