ದುಬೈ: ಕಳೆದ ವಾರ ಒಮಾನ್ ಕೊಲ್ಲಿಯ ಬಳಿ ಇರಾನ್ನ ಡ್ರೋನ್ ದಾಳಿಗೆ ಗುರಿಯಾಗಿದ್ದ ಯುಎಇಗೆ ಸೇರಿದ ತೈಲ ಟ್ಯಾಂಕರ್ನಿಂದ ಸ್ವಲ್ಪ ಪ್ರಮಾಣದ ತೈಲ ಸೋರಿಕೆಯಾಗಿದೆ ಎಂದು 'ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿ' ಬುಧವಾರ ತಿಳಿಸಿದೆ.
'ಎಂ.ವಿ. ಬರಾಕ' ಎಂಬ ಹೆಸರಿನ ಹಡಗಿನಿಂದ ತೈಲ ಸೋರಿಕೆಯಾಗುತ್ತಿದ್ದು, ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸಲಾಗುತ್ತಿದೆ.
ಸಂಬಂಧಿತ ಅಧಿಕಾರಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿಕೆ ತಿಳಿಸಿದೆ.

