HEALTH TIPS

ಪಶ್ಚಿಮ ಏಷ್ಯಾ ಸಂಘರ್ಷ | ಒಪ್ಪಂದಕ್ಕೆ ಬರಲು ಅಮೆರಿಕ ಸೋತಿದೆ: ಇರಾನ್‌

 ಟೆಹರಾನ್‌ : 'ಯುದ್ಧ ಅಂತ್ಯಗೊಳಿಸಲು ಇರಾನ್‌ನ ಮುಂದಿಟ್ಟಿದ್ದ ಪ್ರಸ್ತಾವಗಳಿಗೆ ಸಂಬಂಧಿಸಿ ಅಮೆರಿಕವು ಯಾವುದೇ ಒಂದು ಅಂಶಕ್ಕೂ ಒಪ್ಪಿಕೊಳ್ಳುವಂತೆ ಕಾಣುತ್ತಿಲ್ಲ. ಒಪ್ಪಂದಕ್ಕೆ ಬರಲು ಅಮೆರಿಕವು ಸೋತಿದೆ' ಎಂದು ಇರಾನ್‌ನ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ.


ಒಂದು ಅಣು ಸ್ಥಾವರ ಮಾತ್ರವೇ ಕಾರ್ಯನಿರ್ವಹಿಸಲು ಅವಕಾಶ, ತನಗೆ ಯುರೇನಿಯಂ ವರ್ಗಾಯಿಸಬೇಕು ಎನ್ನುವುದೂ ಸೇರಿ ಐದು ಅಂಶಗಳ ಬೇಡಿಕೆಯನ್ನು ಅಮೆರಿಕ ಮುಂದಿಟ್ಟಿದೆ ಎಂದು 'ಫಾರ್ಸ್‌ ನ್ಯೂಸ್‌' ಸುದ್ದಿ ಸಂಸ್ಥೆ ವರದಿ ಮಾಡಿದೆ.

'ಮುಟ್ಟುಗೋಲು ಹಾಕಿಕೊಂಡಿರುವ ನಮ್ಮ ಆಸ್ತಿಯ ಶೇ 25ರಷ್ಟನ್ನಾದರೂ ನೀಡಿ ಅಥವಾ ಫೆಬ್ರುವರಿ 28ರಿಂದ ಆರಂಭವಾದ ಯುದ್ಧದ ಕಾರಣ ಆದ ನಷ್ಟವನ್ನಾದರೂ ಭರಿಸಿ' ಎಂದು ಇರಾನ್‌ ಕೇಳಿತ್ತು. ಇದನ್ನೂ ಅಮೆರಿಕ ಒಪ್ಪಿಕೊಂಡಿಲ್ಲ.

'ಯುದ್ಧ ಮಾಡಿ ನಮ್ಮಿಂದ ಪಡೆದುಕೊಳ್ಳುವುದಕ್ಕೆ ಸಾಧ್ಯವಾದದನ್ನು ಮಾತುಕತೆಯ ಫಲಪ್ರದವಾದಂತೆ ನೋಡಿಕೊಳ್ಳುವ ಪಡೆದುಕೊಳ್ಳಲು ಅಮೆರಿಕ ಬಯಸುತ್ತಿದೆ' ಎಂದು 'ಮೆಹರ್‌ ನ್ಯೂಸ್‌' ಸುದ್ದಿ ಸಂಸ್ಥೆ ಹೇಳಿದೆ. 'ಲೆಬನಾನ್ ಮೇಲೆ ಇಸ್ರೇಲ್‌ ನಡೆಸುತ್ತಿರುವ ದಾಳಿ ನಿಲ್ಲಬೇಕು, ಅಮೆರಿಕವು ಇರಾನ್‌ನ ಹಡಗುಗಳಿಗೆ ಏ.13ರಿಂದ ಹಾಕಿರುವ ದಿಗ್ಬಂಧನವನ್ನು ತೆರವು ಮಾಡಬೇಕು ಸೇರಿದಂತೆ ಎಲ್ಲ ರೀತಿಯ ಯುದ್ಧ ನಿಲ್ಲಬೇಕು' ಎಂದು ಇರಾನ್‌ ಪ್ರಸ್ತಾವದಲ್ಲಿ ಹೇಳಿತ್ತು. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries