HEALTH TIPS

ಪರಿಸರ ಕಾರ್ಯಕರ್ತರ ಬಗ್ಗೆ ಸಿಜೆಐ ಹೇಳಿಕೆಗೆ ಮಾಜಿ ಅಧಿಕಾರಿಗಳು, ಪರಿಸರವಾದಿಗಳು ಕಳವಳ

 ನವದೆಹಲಿ: ಗುಜರಾತ್‌ನ ಪಿಪವಾವ್ ಬಂದರು ವಿಸ್ತರಣಾ ಯೋಜನೆಗೆ ಪರಿಸರ ಅನುಮತಿಗೆ ಸಂಬಂಧಿಸಿದ ವಿಚಾರಣೆಯ ಸಂದರ್ಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ನೀಡಿದ ಹೇಳಿಕೆ ಬಗ್ಗೆ ಮಾಜಿ ಅಧಿಕಾರಿಗಳು ಮತ್ತು ಪರಿಸರವಾದಿಗಳ ಗುಂಪು ತೀವ್ರ ಕಳವಳವನ್ನು ವ್ಯಕ್ತಪಡಿಸಿದೆ. 


ನಿವೃತ್ತ ಅಧಿಕಾರಿಗಳ ಸಂಘಟನೆಯಾದ ʼಅoಟಿsಣiಣuಣioಟಿಚಿಟ ಅoಟಿಜuಛಿಣ ಉಡಿouಠಿʼ ನ 71 ಮಂದಿ ಮಾಜಿ ಅಧಿಕಾರಿಗಳು ಸಹಿ ಮಾಡಿದ ಪತ್ರದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಹೇಳಿಕೆ ಪಕ್ಷಪಾತ ಮತ್ತು ಪೂರ್ವಾಗ್ರಹವನ್ನು ಸೂಚಿಸುವಂತಿವೆ ಎಂದು ಆತಂಕವನ್ನು ವ್ಯಕ್ತಪಡಿಸಿದೆ.

ಪಿಪಾವಾವ್ ಬಂದರು ವಿಸ್ತರಣೆ ಯೋಜನೆಗೆ ಪರಿಸರ ಹಾಗೂ ಕರಾವಳಿ ನಿಯಂತ್ರಣ ವಲಯ ಅನುಮೋದನೆಗಳನ್ನು ಎತ್ತಿ ಹಿಡಿದು 2025ರ ನವೆಂಬರ್ 26ರಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಓಉಖಿ) ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ವೇಳೆ ಈ ಹೇಳಿಕೆಯನ್ನು ನೀಡಲಾಗಿದೆ.

NGT ಆದೇಶದಲ್ಲಿ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡಲು ಒಲವು ಹೊಂದಿಲ್ಲ ಎಂದು ಅಎI ಸೂಚಿಸಿದಾಗ, ಪರಿಸರ ಹೋರಾಟಗಾರರ ಬಗ್ಗೆ ಟೀಕಾತ್ಮಕವಾಗಿ, "ಭಾರತದಲ್ಲಿ ಯಾವ ಯೋಜನೆಗೆ ಪರಿಸರ ಹೋರಾಟಗಾರರು ಈ ಯೋಜನೆಯನ್ನು ನಾವು ಸ್ವಾಗತಿಸುತ್ತೇವೆ, ದೇಶ ಚೆನ್ನಾಗಿ ಅಭಿವೃದ್ಧಿಯಾಗುತ್ತಿದೆ" ಎಂದು ಹೇಳಿದ್ದಾರೆ ಎಂದು ತೋರಿಸಿ ಎಂದು ಹೇಳಿದ್ದರು.

ಇಂತಹ ಹೇಳಿಕೆಗಳು ನಾಗರಿಕರನ್ನು ಭಯಗೊಳಿಸುತ್ತದೆ ಮತ್ತು ಮೌನಗೊಳಿಸುತ್ತದೆ. ಈ ಮೌಖಿಕ ಹೇಳಿಕೆ ಅಧಿಕೃತ ತೀರ್ಪಿನ ಭಾಗವಾಗದಿದ್ದರೂ ವ್ಯಾಪಕವಾಗಿ ವರದಿಯಾಗಿ ದೇಶದಲ್ಲಿ ಪರಿಸರ ಮತ್ತು ಸಂರಕ್ಷಣಾ ಸುರಕ್ಷತಾ ಕ್ರಮಗಳನ್ನು ದುರ್ಬಲಗೊಳಿಸುವ ನಿರ್ಧಾರಗಳ ಮೇಲೆ ಪ್ರಭಾವ ಬೀರಬಹುದು. ಕೆಳ ನ್ಯಾಯಾಲಯಗಳು ಇದೇ ರೀತಿಯ ವರ್ತನೆಯನ್ನು ಅಳವಡಿಸಿಕೊಳ್ಳುವಂತೆ ಮಾಡಬಹುದು ಎಂದು ಗುಂಪು ಕಳವಳವನ್ನು ವ್ಯಕ್ತಪಡಿಸಿದೆ.

ಅಂತಾರಾಷ್ಟ್ರೀಯ ಜೀವವೈವಿಧ್ಯ ದಿನದ ಸಂದರ್ಭದಲ್ಲಿ ಪ್ರಮುಖ ಪರಿಸರವಾದಿಗಳು ಮತ್ತು ಹೋರಾಟಗಾರರು ಸಿಜೆಐಗೆ ಪತ್ರ ಬರೆದು, ಪರಿಸರಗಳಿಗೆ ಸಂಬಂಧಿಸಿದ ಅರ್ಜಿಗಳೊಂದಿಗೆ ನ್ಯಾಯಾಲಯಗಳನ್ನು ಸಂಪರ್ಕಿಸುವ ನಾಗರಿಕರ ಬಗ್ಗೆ ನೀಡಿರುವ ಅವಹೇಳನಕಾರಿ ಹೇಳಿಕೆಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದರು.

ದಿಲ್ಲಿಯ ಪತ್ರಿಕಾ ಭವನದಲ್ಲಿ ಕರ್ನಾಟಕ, ಒಡಿಶಾ, ಉತ್ತರಾಖಂಡ, ಹರ್ಯಾಣ ಮತ್ತು ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳ ಪರಿಸರವಾದಿಗಳು ಮತ್ತು ಕಾರ್ಯಕರ್ತರು ಭಾರತದ ನೈಸರ್ಗಿಕ ಪರಿಸರ ವ್ಯವಸ್ಥೆಯ ಬಗ್ಗೆ ತಮ್ಮ ಗಂಭೀರ ಕಳವಳಗಳನ್ನು ವ್ಯಕ್ತಪಡಿಸಿದರು. ದೇಶದ ವಿವಿಧ ಭಾಗಗಳ ನಾಗರಿಕರು ಮತ್ತು ನಾಗರಿಕ ಸಮಾಜ ಸಂಘಟನೆಗಳ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಬರೆದ ಪತ್ರವನ್ನು ಪ್ರಸ್ತುತ ಪಡಿಸಿದರು. ನ್ಯಾಯಾಲಯದಲ್ಲಿ ಸಿಜೆಐ ಇತ್ತೀಚೆಗೆ ನೀಡಿದ ಮೌಖಿಕ ಹೇಳಿಕೆಗಳ ಕುರಿತು ಗಂಭೀರ ಕಳವಳಗಳನ್ನು ವ್ಯಕ್ತಪಡಿಸಿದರು.

ಬೆಂಗಳೂರು ಮೂಲದ ಯುನೈಟೆಡ್ ಕನ್ಸರ್ವೇಶನ್ ಮೂವ್‌ಮೆಂಟ್ ನ ವ್ಯವಸ್ಥಾಪಕ ವ್ಯವಸ್ಥಾಪಕ ಟ್ರಸ್ಟಿ ಜೋಸೆಫ್ ಹೂವರ್ ಅವರು, "ಭಾರತದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳ ಹೇಳಿಕೆಗಳು ನಮ್ಮಲ್ಲಿ ಆಳವಾದ ನೋವು ಮತ್ತು ಆತಂಕ ಉಂಟುಮಾಡಿವೆ" ಎಂದು ಹೇಳಿದ್ದಾರೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries