ನವದೆಹಲಿ: ಧಾರ್‌ನಲ್ಲಿರುವ ಭೋಜಶಾಲಾ ಕಮಲ್ ಮೌಲಾ ಮಸೀದಿ ಆವರಣವನ್ನು ಹಿಂದೂ ದೇಗುಲ ಎನ್ನುವ ಮೇ 15 ಮಧ್ಯಪ್ರದೇಶ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.
ಖಾಝಿ ಮೊಯಿನುದ್ದೀನ್ ಎನ್ನುವವರು ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಭೋಜಶಾಲಾದಲ್ಲಿ ಸಂಸ್ಕೃತ ಬೋಧನಾ ಕೇಂದ್ರ ಮತ್ತು ಸರಸ್ವತಿ ದೇವಿಯ ದೇವಾಲಯದ ಕುರುಹುಗಳಿವೆ ಎಂದು ನ್ಯಾಯಾಲಯ ಉಲ್ಲೇಖಿಸಿತ್ತು. ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠವು ತೀರ್ಪು ಪ್ರಕಟಿಸಿತ್ತು. ಅಲ್ಲದೆ ವಿವಾದಿತ ಜಾಗದಲ್ಲಿ ಮುಸ್ಲಿಮರಿಗೆ ಪ್ರಾರ್ಥನೆ ಸಲ್ಲಿಸಲು ಪುರಾತತ್ವ ಇಲಾಖೆ ನೀಡಿದ್ದ ಅನುಮತಿಯನ್ನೂ ಕೋರ್ಟ್ ರದ್ದು ಮಾಡಿತ್ತು.
ಅಲ್ಲದೆ ಪ್ರತ್ಯೇಕ ಭೂಮಿ ಪಡೆಯಲು ಮುಸ್ಲಿಮರು ರಾಜ್ಯ ಸರ್ಕಾರವನ್ನು ಕೋರಬಹುದು ಎಂದು ತೀರ್ಪುನಲ್ಲಿ ಹೇಳಿತ್ತು.

