ಜೈಪುರ (PTI): ಮತ್ತೆ ಕೆಣಕಿದರೆ ಭಾರತವು ಭಾರಿ ಪ್ರತಿದಾಳಿ ನಡೆಸಲಿದೆ. ಭಯೋತ್ಪಾದನೆಯ ವಿರುದ್ಧ ಭಾರತವು ಶೂನ್ಯ ಸಹಿಷ್ಣುತೆ ಹೊಂದಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.
ರಾಜಸ್ಥಾನದ ನಾಗೌರ್‌ನ ಮೆರ್ತಾದಲ್ಲಿ ರಜಪೂತ ದೊರೆ ರಾವ್ ದುಡಾ ಪ್ರತಿಮೆಯನ್ನು ಅನಾವರಣಗೊಳಿಸಿದ ಬಳಿಕ ರಾಜನಾಥ್ ಮಾತನಾಡಿದರು.
'ಸಿಂಧೂರ' ಕಾರ್ಯಾಚರಣೆಯು ಪಾಕಿಸ್ತಾನಕ್ಕೆ ಬಲವಾದ ಸಂದೇಶವನ್ನು ರವಾನಿಸಿದೆ. ಪಾಕಿಸ್ತಾನ ಮತ್ತೆ ಹಳೆ ದಾರಿ ಹಿಡಿದರೆ, ಈವರೆಗೆ ಎದುರಿಸದ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.

