HEALTH TIPS

ಅಮೆರಿಕ ಜತೆ ಮತ್ತೆ ಯುದ್ಧ ನಡೆಯುವ ಸಾಧ್ಯತೆ ಇಲ್ಲ: ಇರಾನ್‌

 ಟೆಹರಾನ್‌/ವಾಷಿಂಗ್ಟನ್‌: 'ಅಮೆರಿಕ ಜತೆ ಮತ್ತೊಮ್ಮೆ ಯುದ್ಧ ನಡೆಸುವ ಸಾಧ್ಯತೆ ಕಡಿಮೆ. ಆದರೆ, ನಾವು ಯಾವುದೇ ಸಂದರ್ಭಕ್ಕೂ ಸಿದ್ಧರಿದ್ದೇವೆ' ಎಂದು ಇರಾನ್‌ನ ರೆವಲ್ಯೂಷನರಿ ಗಾರ್ಡ್‌ ಬುಧವಾರ ಹೇಳಿದೆ.

ಏಪ್ರಿಲ್‌ನಿಂದ ಇರಾನ್‌ ಮತ್ತು ಅಮೆರಿಕ ಮಧ್ಯೆ ಕದನ ವಿರಾಮ ಏರ್ಪಟ್ಟಿತ್ತು. 


ಆದರೆ, ಇದನ್ನು ಉಲ್ಲಂಘಿಸಿ ಅಮೆರಿಕವು ಮಂಗಳವಾರ ಇರಾನ್‌ಗೆ ವೈಮಾನಿಕ ದಾಳಿ ನಡೆಸಿತ್ತು. 'ಸ್ವಯಂ ರಕ್ಷಣೆ'ಗಾಗಿ ದಾಳಿ ನಡೆಸಿದ್ದೇವೆ ಎಂದು ಅಮೆರಿಕ ಹೇಳಿತ್ತು. ಇದಾದ ಮರುದಿನವೇ ಇರಾನ್‌ ರೆವಲ್ಯೂಷರಿ ಗಾರ್ಡ್‌ ಈ ಹೇಳಿಕೆ ನೀಡಿದೆ.

'ಶತ್ರುಗಳು ದುರ್ಬಲಗೊಂಡಿದ್ದಾರೆ. ಆದ್ದರಿಂದ ಯುದ್ಧ ನಡೆಸುವ ಸಾಧ್ಯತೆ ಕಡಿಮೆಯೇ ಇದೆ. ಆದರೆ, ನಮ್ಮ ಸೇನಾ ಪಡೆಗಳು ಶಸ್ತ್ರಸಜ್ಜಿತರಾಗಿ ನಮ್ಮ ಆದೇಶಕ್ಕೆ ಕಾಯುತ್ತಾ ಇದ್ದಾರೆ' ಎಂದು ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ನ ನೌಕಾ ಪಡೆಯ ರಾಜಕೀಯ ಮುಖ್ಯಸ್ಥ ಮೊಹಮ್ಮದ್‌ ಅಕ್ಬರ್‌ಜಾದೆ ಹೇಳಿಕೆ ನೀಡಿದ್ದಾರೆ.

'ಚಹಬಹಾರ್‌ನಿಂದ ಮಹಶಹರ್‌ವರೆಗಿನ ಪ್ರದೇಶವನ್ನು ಸ್ಮಶಾನವಾಗಿಸಲು ನಾವು ಬಿಡುವುದಿಲ್ಲ. ಇದರಲ್ಲಿ ಅನುಮಾನವೇ ಬೇಡ' ಎಂದಿದ್ದಾರೆ. ಈ ಪ್ರದೇಶಗಳು ಇರಾನ್‌ನ ದಕ್ಷಿಣ ಭಾಗ ಎರಡು ತುದಿಗಳಾಗಿದ್ದಾವೆ. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries