HEALTH TIPS

ತರವಾಡು ಮನೆಯ ನವೀಕೃತ ಕಟ್ಟಡದ ಗೃಹಪ್ರವೇಶ, ಕಲಶಾಭಿಷೇಕ

ಕಾಸರಗೋಡು: ತ್ಯಾಗ ಮತ್ತು ಸಮರ್ಪಣಾಮನೋಭಾವದೊಂದಿಗೆ ಸಮಾಜಕ್ಕೆ ನೀಡುವ ಕೊಡುಗೆಗಳಿಂದ ದೇವರೂ ಸಂಪ್ರೀತನಾಗುತ್ತಾನೆ ಎಂದು ಉಪ್ಪಳ ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ  ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ತಿಳಿಸಿದರು.  


ಅವರು ಕೂಡ್ಲು ರಾಮದಾಸನಗರದ ಕಾಳ್ಯಾಂಗಾಡಿನಲ್ಲಿರುವ ಬಾರಿಕ್ಕಾಡು ಅಂಜಾರಿಲ್ಲಂ ತರವಾಡಿನ ನವೀಕೃತ ತರವಾಡು ಮನೆಯ ಗೃಹಪ್ರವೇಶ, ಕೊರತ್ತಿಯಮ್ಮ ಹಾಗೂ ಗುಳಿಗ ದೈವಗಳ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ದೈವ, ದೇವರುಗಳ ಆರಾಧನೆ ಆರೊಗ್ಯಪೂರ್ಣ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗುವುದಾಗಿ ತಿಳಿಸಿದರು.

ತರವಾಡಿನ ತಂತ್ರಿವರ್ಯ ಬ್ರಹ್ಮ ಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅನುಗ್ರಹ ಭಾಷಣ ಮಾಡಿದರು. ತರವಾಡು ಸಮಿತಿ ಅಧ್ಯಕ್ಷ ಜಗದೀಶ್ ಅತ್ತಾವರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಭಾ ಸದಸ್ಯ ಡಾ. ಕೆ. ನಾರಾಯಣ ಬೆಂಗಳೂರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.  ತೆರುವತ್ ಶ್ರೀ ಚೀರುಂಬಾ ಭಗವತೀ ಕ್ಷೇತ್ರದ ಸ್ಥಾನಿಕ ಗಣೇಶ ಮಡೆಯ, ಕ್ಷಿತಿ ಮಂಗಳೂರು, ವೇಣುಗೋಪಾಲನ್ ಉಪಸ್ಥಿತರಿದ್ದರು. ಜಯ ಕೆ. ಬಜಾಲ್ ಸ್ವಾಗತಿಸಿದರು. ಮಮತಾ ದೇವಾಂಗ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು. ಪ್ರಮೋದ್ ಕುಂಬಳೆ ವಂದಿಸಿದರು. 

ಕಾರ್ಯಕ್ರಮದ ಅಂಗವಾಗಿ ವಿವಿಧ ಭಜನಾ ತಂಡಗಳಿಂದ ಭಜನೆ, ಸಾಂಸ್ಕøತಿಕ ಕಾರ್ಯಕ್ರಮ, ಕುಣಿತ ಭಜನೆ, ಕೊರತ್ತಿಯಮ್ಮನ ಕೋಲ, ಗುಳಿಗ ದೈವದ ಕೋಲ ನಡೆಯಿತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries