ಕಾಸರಗೋಡು: ವಿಶ್ವ ಕಾರ್ಮಿಕರ ದಿನದಂಗವಾಗಿ ಕಾರ್ಮಿಕರು ನಿನ್ನೆ ಮೆರವಣಿಗೆ ನಡೆಸಿದರು. 8 ಗಂಟೆ ಕೆಲಸ ಹಾಗೂ 8 ಗಂಟೆ ವಿಶ್ರಾಂತಿ ೮ ಗಂಟೆ ವಿನೋದ ಖಚಿತಪಡಿಸಲು ನಡೆಸಿದ ಐತಿಹಾಸಿಕ ಮುಷ್ಕರದ ಯಶಸ್ಸನ್ನು ಸ್ಮರಿಸಿಕೊಂಡು ಮೇ ದಿನ ಆಚರಿಸಲಾಗುತ್ತಿದೆ. ದೇಶದಲ್ಲಿ ರಾಷ್ಟ್ರೀಯ – ಪ್ರಾದೇಶಿಕ- ಜಿಲ್ಲಾ ಮಟ್ಟಗಳಲ್ಲಿ ಕಾರ್ಮಿಕ ಸಂಘಟನೆಗಳು ದಿನಾಚರಣೆಯಂಗವಾಗಿ ರ‍್ಯಾಲಿ, ಸಾರ್ವಜನಿಕಸಭೆ ನಡೆಸಿವೆ.
ಕಾಸರಗೋಡಿನಲ್ಲಿ ನಡೆದ ಸಂಯುಕ್ತ ಟ್ರೇಡ್ ಯೂನಿಯನ್ ಕಾರ್ಯಕ್ರಮವನ್ನು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಮಣಿಮೋಹನ್ ಉದ್ಘಾಟಿಸಿದರು. ಎಐಟಿಯುಸಿ ಮುಖಂಡ ಮಧುಸೂದನನ್ ನಂಬ್ಯಾರ್ ಅಧ್ಯಕ್ಷತೆ ವಹಿಸಿದರು. ಬಿಜು ಉಣ್ಣಿತ್ತಾನ್, ರಾಘವನ್, ಸುರೇಶ್ ಬಾಬು, ಪ್ರಕಾಶನ್, ಸುನಿಲ್ ಕುಮಾರ್ ಕರಿಚ್ಚೇರಿ, ಕೆ. ಮಣಿಕಂಠನ್, ಸುಜಿತ್ ಪಿ.ವಿ, ಸಿ.ವಿ. ಕೃಷ್ಣನ್, ಕೆ. ನಾರಾಯಣನ್, ಸಿ. ಶಾಂತ ಕುಮಾರಿ, ಪಿ. ಶಿವಪ್ರಸಾದ್, ಅನುರಾಜ್ ಎಂ, ಅಬ್ದುಲ್ ರಹ್ಮಾನ್, ಎ. ನಾರಾಯಣನ್, ಪಿ. ಜಾನಕಿ, ಪಿ.ವಿ. ಕುಂಞಂಬು, ಸಿ.ವಿ. ಕೃಷ್ಣನ್, ಕೆ. ರವೀಂದ್ರನ್ ಮಾತನಾಡಿದರು.

