ಮಹಿಳೆಯರ ಸಂತಾನೋತ್ಪತ್ತಿ ವಯಸ್ಸಿನ ಅವಧಿಯಲ್ಲಿ ಅವರ ಡಿಜಿಟಲ್ ಆರೋಗ್ಯ ದಾಖಲೆಗಳನ್ನು ಸಮಗ್ರವಾಗಿ ಮೇಲ್ವಿಚಾರಣೆ ಮಾಡಲು ಹಾಗೂ ನಿರ್ವಹಿಸಲು ಈ ವೇದಿಕೆಯನ್ನು ವಿನ್ಯಾಸಗೊಳಿಸಲಾಗಿದೆ.
'ಜನನಿ' ವೇದಿಕೆ ಪ್ರಸವಪೂರ್ವ ಆರೈಕೆ, ಹೆರಿಗೆ ಸಿದ್ಧತೆ, ಹೆರಿಗೆ, ನವಜಾತ ಶಿಶುಗಳ ಆರೈಕೆ, ಗೃಹ ಆಧಾರಿತ ನವಜಾತ ಶಿಶು ಹಾಗೂ ಚಿಕ್ಕ ಮಕ್ಕಳ ಆರೈಕೆ ಮತ್ತು ಕುಟುಂಬ ಯೋಜನೆ ಸೇರಿದಂತೆ ತಾಯಿ ಹಾಗೂ ಮಗುವಿನ ಆರೋಗ್ಯ ಸೇವೆಗಳ ಮೇಲೆ ನಿರಂತರ ನಿಗಾ ಇಡುವ ಗುರಿಯನ್ನು ಹೊಂದಿದೆ.
ನಿರಂತರ ಮೇಲ್ವಿಚಾರಣೆ ಹಾಗೂ ಸಮಯೋಚಿತ ಹಸ್ತಕ್ಷೇಪ ಸಾಧ್ಯವಾಗಿಸುವ ಮೂಲಕ 'ಜನನಿ' ಪ್ರತಿಯೊಂದು ಹಂತದಲ್ಲೂ ಸೇವೆಗಳ ಪೂರೈಕೆಯನ್ನು ಬಲಪಡಿಸುತ್ತದೆ ಮತ್ತು ಆರೈಕೆಯ ನಿರಂತರತೆಯನ್ನು ಖಚಿತಪಡಿಸುತ್ತದೆ.
ಇದುವರೆಗೆ 'ಜನನಿ' ವೇದಿಕೆಯಲ್ಲಿ 1.34 ಕೋಟಿ ಫಲಾನುಭವಿಗಳ ಹಾಗೂ 30 ಲಕ್ಷಕ್ಕೂ ಅಧಿಕ ಗರ್ಭಿಣಿಯರ ನೋಂದಣಿಯಾಗಿದೆ. 30 ಲಕ್ಷಕ್ಕೂ ಅಧಿಕ ತಾಯಿ ಮತ್ತು ಮಗು ರಕ್ಷಣೆ (ಎಂಸಿಎಚ್) ಕಾರ್ಡ್‌ಗಳನ್ನು ವಿತರಿಸಲಾಗಿದೆ. 1 ಲಕ್ಷಕ್ಕೂ ಅಧಿಕ ಬಯೋಮೆಟ್ರಿಕ್ ಪರಿಶೀಲನೆಗಳನ್ನು ನಡೆಸಲಾಗಿದೆ.
'ಜನನಿ' ಯೋಜನೆಯ ಮುಖ್ಯ ವೈಶಿಷ್ಟ್ಯವೆಂದರೆ, ಕ್ಯೂಆರ್ ಕೋಡ್ ಹೊಂದಿರುವ ಡಿಜಿಟಲ್ ತಾಯಿ ಮತ್ತು ಮಗು ಆರೋಗ್ಯ (ಎಂಸಿಎಚ್) ಕಾರ್ಡ್. ಇದರಿಂದ ಆರೋಗ್ಯ ದಾಖಲೆಗಳನ್ನು ಎಲ್ಲೆಡೆ ಸುಲಭವಾಗಿ ಬಳಸಬಹುದು ಮತ್ತು ತತ್‌ಕ್ಷಣ ಪಡೆಯಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

